ಕಣಿವೆ ರಾಜ್ಯಕ್ಕೆ ಬ್ಲ್ಯಾಕ್ ಕ್ಯಾಟ್ ಬಲ
Team Udayavani, May 2, 2018, 7:00 AM IST
ಜಮ್ಮು ಕಾಶ್ಮೀರದಲ್ಲಿ ದಿನನಿತ್ಯ ಉಗ್ರರೊಂದಿಗೆ ಸೆಣಸಾಡುತ್ತಿರುವ ಭದ್ರತಾ ಪಡೆಗಳಿಗೆ ಸಹಾಯಕವಾಗಿ ರಾಷ್ಟ್ರೀಯ ಭದ್ರತಾ ಪಡೆ (NSG) ಕಮಾಂಡೋಗಳನ್ನು ನಿಯೋಜಿಸುವ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ‘ಬ್ಲ್ಯಾಕ್ ಕ್ಯಾಟ್’ಗಳೆಂದೇ ಕರೆಯಲ್ಪಡುವ NSG ಸಿಬ್ಬಂದಿ ಕಣಿವೆ ರಾಜ್ಯದಲ್ಲಿ ನಿಯೋಜನೆಗೊಂಡರೆ, ಅಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಸೇನೆ, ಕೇಂದ್ರೀಯ ಮೀಸಲು ಪಡೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಪಡೆಗಳಿಗೆ ಹೊಸ ಬಲ ಬಂದಂತಾಗುತ್ತದೆ.
ಸೇರ್ಪಡೆಗೆ ಕಾರಣ
– ಉಗ್ರರ ಉಪಟಳ ಹೆಚ್ಚಳ
– ನುಸುಳುಕೋರರ ಸಂಖ್ಯೆಯಲ್ಲಿ ಏರಿಕೆ
– ಸೇನಾ ಶಿಬಿರಗಳ ಮೇಲೆ ದಾಳಿ ವೇಳೆ ಮತ್ತೂಂದು ಸಶಕ್ತ ಪಡೆಯ ಆವಶ್ಯಕತೆ
– ಹುತಾತ್ಮ ಸೈನಿಕರಿಂದಾಗಿರುವ ಯೋಧರ ಕೊರತೆ
ಇವರೇ ಏಕೆ?
– ಉಗ್ರರೊಂದಿಗೆ ಕಾದಾಡುವಲ್ಲಿ ಹೆಚ್ಚಿನ ನಿಪುಣತೆ ಹೊಂದಿರುವುದು
– ಉಗ್ರರು ಹೊಕ್ಕಿರುವ ಮನೆಯೊಳಗೆ ನುಗ್ಗುವಲ್ಲಿ ವಿಶೇಷ ತರಬೇತಿ ಪಡೆದಿರುವುದು
– ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆ ವಿಚಾರದಲ್ಲಿ ಛಾತಿ ಗಳಿಸಿರುವುದು
ಪ್ರಯೋಜನ?
– ಭದ್ರತಾ ಪಡೆಗಳಿಗೆ ಮತ್ತಷ್ಟು ಬಲ
– ಸಿಬ್ಬಂದಿ ಕೊರತೆ ನಿವಾರಣೆ
– ಮತ್ತಷ್ಟು ಬಿಗಿ ಭದ್ರತೆ ಕಲ್ಪಿಸಲು ಸಾಧ್ಯ
– ಉಗ್ರರನ್ನು ಪರಿಣಾಮಕಾರಿ ಯಾಗಿ ಮಟ್ಟ ಹಾಕುವುದು
ಬಳಸುವ ಶಸ್ತ್ರಾಸ್ತ್ರ
– ಅತ್ಯಾಧುನಿಕ ಹೆಕ್ಲೆರ್ ಆ್ಯಂಡ್ ಕಾಶ್ ಎಂಪಿ 5 ಸಬ್ ಮೆಷಿನ್ ಗನ್
– ಸ್ನ್ಯಾಪರ್ ರೈಫಲ್‌ಗಳು
– ಗೋಡೆ ಬೇಧಿಸುವ ರೇಡಾರ್
– ಸಿ- 4 ಸ್ಫೋಟಕಗಳು
– 1984ರಲ್ಲಿ ಸ್ಥಾಪನೆ
– ಮೊದಲ ಕಾರ್ಯಾಚರಣೆ: ಆಪರೇಷನ್ ಬ್ಲೂ ಸ್ಟಾರ್
– ಕಮಾಂಡೋ ಬಲ: 7500
– ಪ್ರತಿ ತಂಡದ ಸಿಬ್ಬಂದಿ: ನಾನ್-ಕಮೀಷನ್ಡ್ ಅಧಿಕಾರಿ ನೇತೃತ್ವದಲ್ಲಿನ ಪ್ರತಿ ತಂಡದಲ್ಲಿ ಐವರು ಕಮಾಂಡೋ, ಬಾಂಬ್ ನಿಷ್ಕ್ರಿಯ ತಜ್ಞ, ಮುಸುಕುಧಾರಿ ವ್ಯಕ್ತಿಗಳ ನಿಜ ವೇಷ ಪತ್ತೆ ಹಚ್ಚುವ ತಂತ್ರಜ್ಞ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.