ಕಪ್ಪು ಹಣ: ಬ್ಯಾಂಕ್‌ನ ಹಳೆ ವ್ಯವಹಾರದ ಮೇಲೆ ಕಣ್ಣು
Team Udayavani, Jan 7, 2017, 3:45 AM IST
ಹೊಸದಿಲ್ಲಿ: ಕಪ್ಪು ಕುಳಗಳ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರ, ಕಾಳಧನವನ್ನು ಹೊರ ಗೆಳೆಯಲು ಆರು ವರ್ಷಗಳ ಹಿಂದಿನ ಬ್ಯಾಂಕ್ ವ್ಯವಹಾರಗಳನ್ನೂ ಪರಿಶೀಲಿ ಸಲು ಮುಂದಾಗಿದೆ.
ಈ ಬೆಳವಣಿಗೆಯಿಂದಾಗಿ, ಅಪ ಮೌಲ್ಯದ ಸಂದರ್ಭ ಕಳ್ಳ ದಾರಿ ಬಳಸಿ ಕಾಳಧನವನ್ನು ಸಕ್ರಮ ಮಾಡಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಕಪ್ಪು ಕುಳಗಳು ಮತ್ತೆ ಬೆಚ್ಚಿಬೀಳುವಂತಾಗಿದೆ. ಹಳೆಯ ಹಣಕಾಸು ವ್ಯವಹಾರ ಗಳನ್ನೂ ಪರಿಶೀಲಿಸಲು ತೆರಿಗೆ ಅಧಿಕಾರಿ ಗಳಿಗೆ ಅನುವು ಮಾಡಿಕೊಡುವ ಸಂಬಂಧ ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ನಿರ್ಧರಿ ಸಿದೆ. ಮುಂದಿನ ಬಜೆಟ್‌ನಲ್ಲೇ ಈ ಕುರಿತ ಘೋಷಣೆ ಹೊರಬೀಳಲಿದೆ. ಇದರಿಂದಾಗಿ ಹಳೆಯ ಕೇಸುಗಳನ್ನು ತೆರೆಯಲು ತೆರಿಗೆ ಅಧಿಕಾರಿಗಳಿಗೆ ಅನುಮತಿ ದೊರೆಯಲಿದೆ. 40 ವರ್ಷ ಅಥವಾ ಅದಕ್ಕೂ ಹಿಂದೆ ಸೃಷ್ಟಿಯಾದ ಕಪ್ಪು ಹಣವನ್ನೂ ಪತ್ತೆ ಮಾಡ ಬಹುದಾಗಿದೆ ಎಂದು ಹಿರಿಯ ಅಧಿ ಕಾರಿಯೊಬ್ಬರು ತಿಳಿಸಿದ್ದಾರೆ.
ವಿಶೇಷ ಎಂದರೆ, ದಶಕಗಳ ಹಿಂದೆ ಅಕ್ರಮವಾಗಿ ಸಂಪತ್ತು ಗಳಿಸಿದ ವ್ಯಕ್ತಿ ಗಳು ಪರಿಶೀಲನೆ ವೇಳೆ ಸಿಕ್ಕಿಬಿದ್ದರೆ, ಆಸ್ತಿ ಖರೀದಿಸಿದ ವರ್ಷ ಯಾವುದೇ ಇರಲಿ, ಆಸ್ತಿಯ ಈಗಿನ ಮೌಲ್ಯದ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.