ದಿನಪತ್ರಿಕೆ ಸರಬರಾಜು ತಡೆಯುವುದು ಕಾನೂನು ಪ್ರಕಾರ ಅಪರಾಧ: ಹಿರಿಯ ವಕೀಲರ ಪ್ರತಿಕ್ರಿಯೆ
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಶ್ವಾಸಾರ್ಹ ಮಾಹಿತಿ ಸಿಗಬೇಕಾಗಿದೆ.
Team Udayavani, Apr 3, 2020, 2:00 PM IST
Representative Image
ನವದೆಹಲಿ:ಕೋವಿಡ್ 19 ಸೋಂಕು ತಡೆಗಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದು, ತುರ್ತು ಸೇವೆಗಳನ್ನು ನಿರ್ಧರಿಸಿದ ಮೇಲೆಯೂ ಪತ್ರಿಕೆಗಳನ್ನು ಹಂಚಲು ತಡೆಯೊಡ್ಡುತ್ತಿರುವುದನ್ನು ಮುಂದುವರಿಸಿರುವುದು ಕಾನೂನು ಪ್ರಕಾರ ಅಪರಾಧ ಎಂದು ದೇಶದ ಹಿರಿಯ ವಕೀಲರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಶ್ವಾಸಾರ್ಹ ಮಾಹಿತಿ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಪತ್ರಿಕೆ ವಿತರಣೆಗೆ ತಡೆಯೊಡ್ಡಿದರೆ ಅದು ತುರ್ತು ಸೇವೆಗಳ ನಿರ್ವಹಣಾ ಕಾಯ್ದೆ (ಎಸ್ಮಾ) ಪ್ರಕಾರ ಅಪರಾಧ ಎಂದು ಪರಿಗಣಿಸಬೇಕು ಎಂದು ವಕೀಲರು ತಿಳಿಸಿದ್ದಾರೆ.
ಹೆಸರಾಂತ ವಕೀಲರಾದ ಹರೀಶ್ ಸಾಳ್ವೆ ಅವರು ಸಾಲಿಸಿಟರ್ ಜನರಲ್ ಆಗಿ ಹಾಗೂ ಕುಲಭೂಷಣ್ ಯಾದವ್ ಪರವಾಗಿ ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ಭಾರತದ ಪ್ರತಿನಿಧಿಯಾಗಿದ್ದಾರೆ. ದೇಶದಲ್ಲಿ ದಿನಪತ್ರಿಕೆ ಹಂಚಿಕೆಗೆ ತಡೆಯೊಡ್ಡುತ್ತಿರುವ ಬಗ್ಗೆ ತೀವ್ರ
ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಂಬ ಪ್ರಪಂಚದಲ್ಲಿ ಬರೇ ಸುಳ್ಳು ಹಾಗೂ ಗಾಸಿಪ್ ಸುದ್ದಿಗಳದ್ದೇ ಕಾರುಬಾರು. ಜವಾಬ್ದಾರಿಯುತ ಪತ್ರಿಕೆಯಲ್ಲಿ ಮುದ್ರಣವಾಗುವ ಶಬ್ದಗಳಿಗೆ ಹೊಣೆಗಾರಿಕೆ ಇದ್ದು ಈ ನಿಟ್ಟಿನಲ್ಲಿ ದಿನಪತ್ರಿಕೆ ತುರ್ತು ಸೇವೆಯಾಗಿದೆ. ಇಂತಹ ಸಮಯದಲ್ಲಿ ಜವಾಬ್ದಾರಿಯುತ ಪತ್ರಕರ್ತರು ಸುದ್ದಿ ಬರೆಯುವುದು ಅವರ ಹೊಣೆಗಾರಿಕೆಯಾಗಿದೆ. ಅಲ್ಲದೇ ಯಾವುದೇ ಗೊಂದಲ,
ಭಯ ಹುಟ್ಟಿಸದೇ ಮಾಹಿತಿ ನೀಡುವ ಕೆಲಸಗಳನ್ನು ಪತ್ರಿಕೆಗಳು ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದಿನಪತ್ರಿಕೆ ಹಂಚಲು ಯಾವುದೇ ನಿರ್ಬಂಧಗಳು ಇಲ್ಲ. ಪತ್ರಿಕೆ ತುರ್ತು ಸೇವೆಯ ಪಟ್ಟಿಯಲ್ಲಿದೆ. ಹೀಗಾಗಿ ಯಾರೊಬ್ಬರೂ ಪತ್ರಿಕೆ ವಿತರಿಸುವುದನ್ನು ತಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಂವಿಧಾನ ತಜ್ಞ, ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಮಾತನಾಡಿದ್ದು, ಮುದ್ರಿತವಾಗುವ ದಿನಪತ್ರಿಕೆಯನ್ನು ಓದುವುದು ನಾಗರಿಕರ ಮೂಲಭೂತ ಹಕ್ಕು. ಮುಂಜಾನೆಯ ಒಂದು ಕಪ್ ಚಹಾ ಸೇವನೆಯೊಂದಿಗೆ ಪತ್ರಿಕೆ ಓದುವುದು ನಮ್ಮ ಕರ್ತವ್ಯವಾಗಿದೆ. ಪತ್ರಕರ್ತರು ಮುದ್ರಣ ಮಾಧ್ಯಮದ ಸೈನಿಕರು. ಅವರು ನಿಖರವಾದ ಸುದ್ದಿಯನ್ನು ನೀಡುವ ಮೂಲಕ ಜನರಿಗೆ ಸತ್ಯವನ್ನು
ತಲುಪಿಸುತ್ತಾರೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court Verdict: ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ… ಆರೋಪಿ ಸಂಜಯ್ ರಾಯ್ ದೋಷಿ
Suffocation: ಚಳಿಗೆಂದು ಹಾಕಿದ ಬೆಂಕಿ… ಬೆಳಗಾಗುವಷ್ಟರಲ್ಲಿ ದಂಪತಿಯ ಜೀವವೇ ಹೋಗಿತ್ತು…
IMF; ಜಗತ್ತಿಗೆ ಆರ್ಥಿಕ ಹಿಂಜರಿತ ಉಂಟಾದರೂ, ಭಾರತಕ್ಕೆ ಅಪಾಯ ಇಲ್ಲ
Russia ಸೇನೆಯಲ್ಲಿದ್ದ 16 ಭಾರತೀಯರು ನಾಪತ್ತೆ, 12 ಜನ ಸಾವು: ಕೇಂದ್ರ
ಬಾಲ್ಯ ವಿವಾಹ ಕಾನೂನು ಪರಿಶೀಲನೆ: ಸುಪ್ರೀಂ ಅಸ್ತು
MUST WATCH
ಹೊಸ ಸೇರ್ಪಡೆ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
US visa: ಬೆಂಗಳೂರಿನಲ್ಲೇ ಅಮೆರಿಕ ವೀಸಾ: ಕನಸು ಸನ್ನಿಹಿತ
Champions Trophy: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಪ್ರಕಟ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.