ಚಲಿಸುವ ರೈಲು ಏರುವುದನ್ನು ತಡೆಯಲು ಬ್ಲೂ ಲೈಟ್ ವ್ಯವಸ್ಥೆ
Team Udayavani, Jan 15, 2019, 1:00 AM IST
ಹೊಸದಿಲ್ಲಿ: ವಿಮಾನ ನಿಲ್ದಾಣಗಳ ಮಾದರಿಯಲ್ಲಿ ರೈಲು ನಿಲ್ದಾಣ ಗಳಲ್ಲಿ ಕೂಡ ನಿಗದಿತ ಪ್ರಯಾಣ ಅವಧಿಗಿಂತ 20 ನಿಮಿಷ ಮೊದಲೇ ಇರಬೇಕು ಎಂದು ನಿಯಮ ಜಾರಿಗೆ ತರಲು ಉದ್ದೇಶಿಸಲಾದ ಬೆನ್ನಲ್ಲೇ ಈಗ ಚಲಿಸುತ್ತಿರುವ ರೈಲನ್ನು ಹತ್ತಲು ಹೋಗಿ ಉಂಟಾಗುವ ದುರಂತಗಳನ್ನು ತಪ್ಪಿಸಲು ನೀಲಿ ಬಣ್ಣದ ಲೈಟ್ ಅನ್ನು ಇಎಂಯು ಕೋಚ್ನಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.
ಅದನ್ನು ರೈಲಿನ ಗಾರ್ಡ್ನ ಕ್ಯಾಬಿನ್ಗೆ ಸಂಪರ್ಕಿಸಲಾಗಿದೆ. ನೀಲಿ ಬಣ್ಣದ ಲೈಟ್ ಪ್ಲಾಟ್ಫಾರಂ ಮತ್ತು ಪ್ರಯಾಣಿಕರ ನಡುವೆ ಕಾಯ್ದುಕೊಳ್ಳಬೇಕಾದ ಅಂತರವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಯಾವುದಾದರೂ ಇತರ ವಸ್ತುಗಳು ಅಪ್ಪಳಿಸುವ ಅಥವಾ ಎದುರಿನಿಂದ ಬರುವ ರೈಲು ಪ್ರಯಾಣಿಕರಿಗೆ ಢಿಕ್ಕಿ ಹೊಡೆಯುವ ಸಾಧ್ಯತೆಗಳ ಬಗ್ಗೆ ಇದು ಎಚ್ಚರಿಕೆ ನೀಡುತ್ತದೆ. ಈ ವ್ಯವಸ್ಥೆಯನ್ನು ಮುಂಬೈನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಮೆಟ್ರೋ ರೈಲುಗಳಲ್ಲಿ ಸ್ವಯಂಚಾಲಿತ ಬಾಗಿಲುಗಳು ಇರುತ್ತವೆ. ಆದರೆ ಸಾಮಾನ್ಯ ರೈಲುಗಳಲ್ಲಿ ಇಂಥ ವ್ಯವಸ್ಥೆ ಇಲ್ಲ. ಹೀಗಾಗಿ, ಚಲಿಸುತ್ತಿರುವ ರೈಲನ್ನು ಏರಿ ಉಂಟಾಗುವ ಅವಘಡಗಳನ್ನು ತಪ್ಪಿಸಲು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೊಸ ವ್ಯವಸ್ಥೆ ಅನುಸರಿಸಲು ಸೂಚನೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.