ಬ್ಲೂವೇಲ್ ಆಟಕ್ಕೆ ಮತ್ತೂಬ್ಬ ಬಾಲಕ ಬಲಿ?
Team Udayavani, Sep 9, 2017, 9:40 AM IST
ಲಕ್ನೋ: ಉತ್ತರಪ್ರದೇಶದ 14 ವರ್ಷ ವಯಸ್ಸಿನ ಬಾಲಕನೊಬ್ಬ ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿನ ಕೂಪಕ್ಕೆ ತಳ್ಳುವ ಆನ್‌ಲೈನ್ ಆಟ ಬ್ಲೂವೇಲ್ ಗೇಮ್‌ಗೆ ಈ ಬಾಲಕ ಬಲಿಯಾಗಿರುವ ಶಂಕೆಗಳು ವ್ಯಕ್ತವಾಗಿವೆ. ಹೀಗಾಗಿ, ಪೊಲೀಸರು ಬ್ಲೂವೇಲ್ ಗೇಮ್ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಮೃತ ಬಾಲಕ ಆದಿತ್ಯ ವರ್ಧನ್ ಕಳೆದ 2 ವಾರಗಳಿಂದ ಆನ್‌ಲೈನ್ ಆಟ ಆಡುತ್ತಿದ್ದ ಮತ್ತು ಆತಂಕಗೊಂಡವನಂತೆ ಕಾಣುತ್ತಿದ್ದ ಎಂದು ಆತನ ಸ್ನೇಹಿತರು ಹೇಳಿದ್ದಾರೆೆ. ಈ ಹಿನ್ನೆಲೆಯಲ್ಲಿ ಬ್ಲೂವೇಲ್ ಗೇಮ್ ನಿಗ್ರಹದ ಕುರಿತು ಶಾಲೆ ಆಡಳಿತಗಳಿಂದ ಹೇಳಿಕೆ ಪಡೆಯಬೇಕೆಂದು ಅಧಿಕಾರಿಗಳಿಗೆ ಪೊಲೀಸ್ ಮಹಾನಿರ್ದೇಶಕರು ನಿರ್ದೇಶನವನ್ನೂ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.