ಬ್ಲೂ ವೇಲ್‌ಗೆ ಜೀವನ್ಮುಖೀ ಪಿಂಕ್ ವೇಲ್ ಚಾಲೆಂಜ್!
Team Udayavani, Aug 7, 2017, 6:30 AM IST
ಹೊಸದಿಲ್ಲಿ: ರಾವಣ, ಕಂಸ, ಮಹಿಷಾಸುರನಂಥ ದುಷ್ಟರ ಉಪಟಳ ಹೆಚ್ಚಾದಾಗ ರಾಮ, ಕೃಷ್ಣ, ಚಾಮುಂಡಿಯರು ಅವತರಿಸಿ ಆ ಕೆಟ್ಟ ಶಕ್ತಿಗಳನ್ನು ಸಂಹರಿಸಿದ್ದಾರೆ. ಹಾಗೇ ಪ್ರಪಂಚದಾದ್ಯಂತ ಮಕ್ಕಳ ಪ್ರಾಣಕ್ಕೆ ಕಂಟಕವಾಗಿರುವ “ಬ್ಲೂ ವೇಲ್ ಸೂಸೈಡ್ ಚಾಲೆಂಜ್’ ಎಂಬ ಸಾಯುವ ಆಟಕ್ಕೆ ಪ್ರತಿಯಾಗಿ “ಪಿಂಕ್ ವೇಲ್ ಚಾಲೆಂಜ್’ ಎಂಬ ಬದುಕಿಸುವ ಆಟ ಹುಟ್ಟಿಕೊಂಡಿದೆ.
ರಷ್ಯಾದಲ್ಲಿ ಹುಟ್ಟಿದ ಬ್ಲೂ ವೇಲ್ ಸುಸೈಡ್ ಚಾಲೆಂಜ್‌ಗೆ “ಸಾವಿನ ಆಟ’ ಎಂಬ ಕುಖ್ಯಾತಿಯಿದೆ. ರಷ್ಯಾ, ಅಮೆರಿಕ, ಫ್ರಾನ್ಸ್ ಸಹಿತ ವಿವಿಧ ರಾಷ್ಟ್ರಗಳಲ್ಲಿ 180ಕ್ಕೂ ಹೆಚ್ಚು ಮಕ್ಕಳನ್ನು ಆತ್ಮಹತ್ಯೆಗೆ ಪ್ರೇರೇಪಿಸಿರುವುದು ಈ ಆನ್‌ಲೈನ್ ಆಟದ ಕುಖ್ಯಾತಿ! 10ರಿಂದ 14 ವರ್ಷದ ಮಕ್ಕಳನ್ನೇ ಗುರಿಯಾಗಿಸಿಕೊಂಡಿರುವ ಈ ಆಟ ಇತ್ತೀಚೆಗಷ್ಟೇ ಭಾರತದಲ್ಲಿ ಮೊದಲ ಬಲಿ ಪಡೆದಿತ್ತು. ಮುಂಬಯಿಯ ಬಾಲಕ ಮನ್‌ಪ್ರೀತ್ ಸಿಂಗ್ ಈ ಬ್ಲೂ ವೇಲ್ ಬಲೆಗೆ ಸಿಲುಕಿ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈಗ ಬ್ಲೂ ವೇಲ್ ಚಾಲೆಂಜ್‌ಗೆà ಚಾಲೆಂಜ್ ಹಾಕಲು “ಪಿಂಕ್ ವೇಲ್ ಚಾಲೆಂಜ್’ ಎಂಬ ಪ್ರಾಣ ರಕ್ಷಕ ಆಟ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ, ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ.
ಇದು ಬ್ಲೂ ವೇಲ್‌ಗೆ ತದ್ವಿರುದ್ಧ
ಬ್ಲೂ ವೇಲ್ ಚಾಲೆಂಜ್‌ಗೆ ಹೋಲಿಸಿದರೆ ಪಿಂಕ್ ವೇಲ್ ಚಾಲೆಂಜ್ ಪಕ್ಕಾ ತದ್ವಿರುದ್ಧ ಆಟ. ಬ್ಲೂ ವೇಲ್ ಆಟಗಾರರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದರೆ, ಪಿಂಕ್ ವೇಲ್ ಮತ್ತೂಬ್ಬರ ಪ್ರಾಣ ಉಳಿಸಲು ಉತ್ತೇಜಿಸುತ್ತದೆ. ಬ್ಲೂವೇಲ್‌ನಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲೆಂದೇ ಆ ಗೇಮ್‌ನ ಮಾದರಿ, ನಿಯಮ, ಕ್ರಮಗಳಿಗೆ ಸಂಪೂರ್ಣ ವಿರುದ್ಧವಾಗಿ ಪಿಂಕ್ ವೇಲ್ ಚಾಲೆಂಜ್ ಆಟವನ್ನು ರೂಪಿಸಲಾಗಿದೆ. ಬ್ರೆಜಿಲ್‌ನ ಸಂಸ್ಥೆಯೊಂದು ಈ ಆಟ ಆರಂಭಿಸಿದ್ದು, “ಆನ್‌ಲೈನ್ ಆಟಗಳ ಮೂಲಕ ಪ್ರಾಣವನ್ನೂ ಉಳಿಸಬಹುದು. ಜತೆಗೆ ಆಟಗಾರರ ಮನಸ್ಸಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸಬಹುದು’ ಎಂಬ ಸಂದೇಶ ಸಾರುವ ಉದ್ದೇಶ ಹೊಂದಿದೆ.
ಜಾಲತಾಣದಲ್ಲಿ ಜನಪ್ರಿಯತೆ
ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಪಿಂಕ್‌ವೆàಲ್ ಚಾಲೆಂಜ್‌ಗೆ ಅಪಾರ ಬೆಂಬಲ ವ್ಯಕ್ತವಾಗಿದೆ. ಫೇಸ್‌ಬುಕ್‌ನಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಬಳಕೆದಾರರು ಹಾಗೂ 45 ಸಾವಿರಕ್ಕೂ ಹೆಚ್ಚು ಇನ್‌ಸ್ಟಾಗ್ರಾಂ ಸದಸ್ಯರು ಪಿಂಕ್ ವೇಲ್ ಅನ್ನು ಫಾಲೋ ಮಾಡುತ್ತಿದ್ದಾರೆ. ಸಕಾರಾತ್ಮಕ ಪ್ರೇರಣೆಯ ಈ ಆಟವನ್ನು ಮೆಚ್ಚಿ ಸಾವಿರಾರು ಮಂದಿ ಕಮೆಂಟ್ ಕೂಡ ಮಾಡಿದ್ದಾರೆ. ಈ ಆಟ ವೆಬ್‌ನಲ್ಲಿ ಲಭ್ಯವಿದ್ದು, ಸ್ಮಾರ್ಟ್‌ಫೋನ್‌ಗಳಲ್ಲಿ ಕೂಡ ಪಿಂಕ್ ವೇಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಈ ಗೇಮ್‌ನ ವೆಬ್‌ಸೈಟ್; ಚಿಚlಛಿಜಿಚrಟsಚ.cಟಞ.ಚಿrನಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ
Chhattisgarh; ನಕ್ಸಲ್ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ
Tamil Nadu University; ಕುಲಪತಿ ನೇಮಕ: ಸಿಎಂ, ಗೌರ್ನರ್ ನಡುವೆ ಮತ್ತ ಸಂಘರ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.