ಬ್ಲೂವೇಲ್ ಮಹಾಮಾರಿಗೆ ಕೇರಳದಲ್ಲೇ ಮತ್ತೆರಡು ಬಲಿ
Team Udayavani, Aug 17, 2017, 8:10 AM IST
ಕಣ್ಣೂರು/ತಿರುವನಂತಪುರ/ಹೊಸದಿಲ್ಲಿ: ಜೀವವನ್ನೇ ಕೇಳುವ ಆನ್‌ಲೈನ್‌ನ ಅಪಾಯಕಾರಿ ಆಟ, ಬ್ಲೂವೇಲ್‌ಗೆ ಕೇರಳದಲ್ಲಿ ಮತ್ತಿಬ್ಬರು ಬಲಿಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇದರೊಂದಿಗೆ ಭಾರತದಲ್ಲಿ ಬ್ಲೂವೇಲ್ ಮಹಾಮಾರಿಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೇರಿದೆೆ. ಈ ಆನ್‌ಲೈನ್ ಆಟದ ಚಟ ವ್ಯಾಪಕವಾಗಿ ಹಬ್ಬುತ್ತಿದ್ದು, ಬಾಲಕರ ಮನಸ್ಸನ್ನೇ ತಿರುಗಿಸಿ ಜೀವವನ್ನೇ ಬಲಿ ಪಡೆಯುತ್ತಾದ್ದರಿಂದ, ಆನ್‌ಲೈನ್ ವಿವಿಧ ಜಾಲತಾಣ ಗಳಲ್ಲಿ ಬ್ಲೂವೇಲ್ ಲಿಂಕ್ ಅನ್ನು ಅಳಿಸಿ ಹಾಕುವಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ. ತಪ್ಪಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಕೇರಳದ ತಿರುವನಂತಪುರದಲ್ಲಿ ಜು.25ರಂದು 16ರ ಬಾಲಕ ಮನೋಜ್ ಸಿ ಮನು ಬ್ಲೂವೇಲ್ ಟಾಸ್ಕ್ ಪೂರೈಸಲು ನದಿಗೆ ಹಾರಿ ಆತ್ಮಹತ್ಯೆ ಮಾಡಿದ್ದಾಗಿ ಹೇಳಲಾಗಿದೆ. ಈತ ಕಳೆದ ನವೆಂಬರ್‌ನಿಂದ ಆಟದಲ್ಲಿ ತೊಡಗಿಸಿಕೊಂಡಿದ್ದು, ಕೈಯಲ್ಲಿ ಎಬಿಐ ಎಂದು ಕೆತ್ತಿಕೊಂಡಿದ್ದ ಎಂದು ಹೇಳಲಾಗಿದೆ. ಆದರೆ ಎಬಿಐ ಎಂದರೇನು ಎಂದು ತಿಳಿದುಬಂದಿಲ್ಲ.
ಬಾಲಕ ಮನೋಜ್ ಬ್ಲೂವೇಲ್‌ನ ಫೈನಲ್ ಟಾಸ್ಕ್ ನಲ್ಲಿದ್ದು ಒಂದೋ ಆತ್ಮಹತ್ಯೆ ಮಾಡಿಕೊಳ್ಳಬೇಕು, ಅಥವಾ ಮತ್ತೂಬ್ಬರನ್ನು ಹತ್ಯೆ ಮಾಡಬೇಕು ಎಂದಿದ್ದ. ಇದನ್ನು ಕೇಳಿ ತನಗೆ ಹೆದರಿಕೆಯಾಗಿದ್ದಾಗಿ ಮನೋಜ್ ಹೇಳಿದ್ದ ಎಂದು ತಾಯಿ ಟೀವಿ ಚಾನೆಲ್‌ಗಳಿಗೆ ಹೇಳಿದ್ದಾರೆ. ಅಲ್ಲದೇ ಬಾಲಕ ಮನೋಜ್, “ತಾನು ಸತ್ತರೆ, ನೀನು ನೊಂದುಕೊಳ್ಳುತ್ತೀಯಾ?’ ಎಂದೂ ಕೇಳಿದ್ದ ಎಂದು ಆತನ ತಾಯಿ ಹೇಳಿದ್ದಾರೆ.
ಕಣ್ಣೂರಿನಲ್ಲಿ ನಡೆದ ಇನ್ನೊಂದು ಪ್ರಕರಣದಲ್ಲಿ 22 ವರ್ಷದ ಯುವಕ ಬ್ಲೂವೇಲ್‌ಗೆ ಬಲಿಯಾಗಿದ್ದಾಗಿ ಹೇಳಲಾಗಿದೆ. ಈತನೂ ಕೈಯಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಕೆತ್ತಿಕೊಂಡಿದ್ದಾಗಿ, ಕೆಲ ದಿನಗಳ ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ.
ಈ ಹಿಂದೆ ಆ.12ರಂದು ಪಶ್ಚಿಮ ಬಂಗಾಳದ ವೆಸ್ಟ್ ಮಿಡ್ನಾಪೂರ್‌ನಲ್ಲಿ 15ರ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು ಬ್ಲೂವೇಲ್ ಪ್ರಕರಣ ಎನ್ನಲಾಗಿತ್ತು. ಮುಂಬಯಿನ ಅಂಧೇರಿ ಈಸ್ಟ್‌ನಲ್ಲೂ 14ರ ಬಾಲಕ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಇದೇ ವೇಳೆ ಇತ್ತ ದಿಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ದಾವೆ ಯೊಂದು ಸಲ್ಲಿಕೆಯಾಗಿದ್ದು, ಸಾಮಾಜಿಕ ಜಾಲತಾಣಗಳಿಂದ ಬ್ಲೂವೇಲ್ ಅಳಿಸುವಂತೆ ಮನವಿ ಮಾಡಲಾಗಿದೆ.
ಲಿಂಕ್ ಅಳಿಸಲು ಸೂಚನೆ
ಇದೇ ವೇಳೆ ಬ್ಲೂವೇಲ್‌ಗೆ ಬಲಿಯಾಗುವುದನ್ನು ತಪ್ಪಿಸಲು ಜಾಲತಾಣಗಳಲ್ಲಿ ಲಿಂಕ್ ಅಳಿಸುವಂತೆ ಪ್ರಮುಖ ತಾಣಗಳಾದ, ಗೂಗಲ್, ಫೇಸ್‌ಬುಕ್, ಯಾಹೂ, ವಾಟ್ಸ್‌ಆ್ಯಪ್, ಮೈಕ್ರೋಸಾಫ್ r ಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ. ಒಂದು ವೇಳೆ ಇದಕ್ಕೆ ತಪ್ಪಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. “ಬ್ಲೂ ವೇಲ್ ವಿಚಾರದಲ್ಲಿ ಹಲವು ದೂರುಗಳು ಬಂದಿವೆ. ಈ ಸಂಬಂಧ ಅಂತರ್ಜಾಲ ಕಂಪೆನಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡ ಲಾಗಿದೆ. ಬಾಲಕರು ಈ ಆನ್‌ಲೈನ್ ಆಟದಿಂದ ಆತ್ಮಹತ್ಯೆಗೆ ಪ್ರೇರೇ ಪಿತರಾಗುವುದು ತೀವ್ರ ನೋವಿನ ವಿಚಾರವಾಗಿದ್ದು, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಬ್ಲೂವೇಲ್ ಲಿಂಕ್ ಅಳಿಸಲು ಹೇಳಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಸ್ವಾಗತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Rajasthan:ಪೊಲೀಸ್ ಭದ್ರತೆಗೆ ಆದ 9 ಲಕ್ಷ ರೂ.ಬಿಲ್ ಪಾವತಿಸಿ: ರಾಜಸ್ಥಾನ ರೈತನಿಗೆ ನೋಟಿಸ್
ED: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಫ್ಲ್ಯಾಟ್ ಇ.ಡಿ.ವಶಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.