ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರ ಅಟ್ಟಹಾಸ; ಉಗ್ರರ ದಾಳಿಗೆ ಮತ್ತಿಬ್ಬರು ಬಲಿ
ಭದ್ರತಾ ಪಡೆಗಳ ಸತತ ಕಾರ್ಯಾಚರಣೆ ಹೊರತಾಗಿಯೂ ನಿಲ್ಲದ ದಾಳಿಗಳು
Team Udayavani, Oct 17, 2021, 6:00 AM IST
ಸಾಂದರ್ಭಿಕ ಚಿತ್ರ..
ಶ್ರೀನಗರ: ಕಳೆದೊಂದು ವಾರದಿಂದ ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ನಡೆಯುತ್ತಿರುವ ನಾಗರಿಕರ ಹತ್ಯೆಗಳು ಅವ್ಯಾಹತವಾಗಿ ಮುಂದುವರಿದಿವೆ.
ಶನಿವಾರ ಶ್ರೀನಗರದಲ್ಲಿ ಮತ್ತೊಂದು ಸುತ್ತಿನ ದಾಳಿ ನಡೆಸಿರುವ ಉಗ್ರರು, ಅರಬಿಂದ್ ಕುಮಾರ್ ಶಾ ಹಾಗೂ ವೀರೇಂದ್ರ ಪಾಸ್ವಾನ್ ಎಂಬ ಬೀದಿಬದಿ ವ್ಯಾಪಾರಿಗಳನ್ನು ಹತ್ಯೆ ಮಾಡಿದ್ದಾರೆ.
ಶನಿವಾರ ಸಂಜೆ 6:30ರ ಸುಮಾರಿಗೆ ಈದ್ಗಾ ಮೈದಾನದ ಬಳಿ ದಾಳಿ ನಡೆಸಿದ ಉಗ್ರರು, ಅಲ್ಲಿ ಅರಬಿಂದ್ ಅವರನ್ನು ಕೊಂದರು. ಆನಂತರ, ಅದೇ ಪ್ರಾಂತ್ಯದ ಮತ್ತೊಂದು ಬೀದಿಯಲ್ಲಿ ದಾಳಿ ನಡೆಸಿ, ಮತ್ತೊಬ್ಬ ಬೀದಿ ವ್ಯಾಪಾರಿ ವೀರೇಂದ್ರ ಅವರನ್ನು ಹತ್ಯೆಗೈದಿದ್ದಾರೆ.
ಈ ಮೂಲಕ ಕಳೆದೊಂದು ವಾರದಲ್ಲಿ ಒಟ್ಟು 9 ನಾಗರಿಕರು ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಉಗ್ರರ ಈ ಅಟ್ಟಹಾಸವನ್ನು ಮಟ್ಟಹಾಕಲು ಭದ್ರತಾ ಪಡೆಗಳು ಶಕ್ತಿಮೀರಿ ಶ್ರಮಿಸುತ್ತಿವೆ. ಈ ಕಾರ್ಯಾಚರಣೆಗಳಲ್ಲಿ ಹಲವಾರು ಯೋಧರು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ತಡವಾದರೂ ಮಾನ್ಯ: ಸುಪ್ರೀಂ ಕೋರ್ಟ್
ಯೋಧರ ಮೃತದೇಹ ಪತ್ತೆ
ಜಮ್ಮು ಕಾಶ್ಮೀರದ ಜಿಲ್ಲೆಯಲ್ಲಿ 3 ದಿನಗಳ ಹಿಂದೆ ಉಗ್ರರ ವಿರುದ್ಧದ ಕಾರ್ಯಾಚರಣೆಯ ವೇಳೆ ನಾಪತ್ತೆಯಾಗಿದ್ದ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಅಧಿಕಾರಿ (ಜೆಸಿಒ) ಹಾಗೂ ಇನ್ನಿಬ್ಬರು ಯೋಧರ ಮೃತದೇಹಗಳನ್ನು ಸೇನೆ ಪತ್ತೆ ಹಚ್ಚಿದೆ. ಕಾರ್ಯಾಚರಣೆಯ ನಂತರ ಈ ಮೂವರು ಕಾಣೆಯಾಗಿದ್ದು ತಿಳಿದುಬಂದಿತ್ತು. ಆ ಹಿನ್ನೆಲೆಯಲ್ಲಿ, ಇಡೀ ಪ್ರಾಂತ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆ ಆರಂಭವಾಗಿ 48 ಗಂಟೆಗಳ ನಂತರ, ಮೃತದೇಹಗಳು ಸಿಕ್ಕಿವೆ.
ಇಬ್ಬರು ಉಗ್ರರ ಹತ್ಯೆ
ಪುಲ್ವಾಮಾ ಜಿಲ್ಲೆಯ ಪಾಂಪೊರೆ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಉಮರ್ ಮುಷ್ತಾಕ್ ಖಾಂಡೇ ಮೃತಪಟ್ಟಿದ್ದಾನೆ. ಈ ವರ್ಷ ಆರಂಭದಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾಗವಹಿಸಿದ್ದ ಈತ ಇಬ್ಬರು ನಾಗರಿಕರನ್ನು ಕೊಂದಿದ್ದ ಎಂದು ಹೇಳಲಾಗಿದೆ. ದಾಳಿಯಲ್ಲಿ ಮೃತಪಟ್ಟಿರುವ ಮತ್ತೊಬ್ಬ ಉಗ್ರನ ಗುರುತು ಪತ್ತೆಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.