Tragedy: ಅಪಘಾತವಾಗಿ 9 ದಿನಗಳ ಬಳಿಕ ಚೆನ್ನೈ ಮಾಜಿ ಮೇಯರ್ ಪುತ್ರನ ಶವ ನದಿಯಲ್ಲಿ ಪತ್ತೆ
Team Udayavani, Feb 13, 2024, 10:20 AM IST
ಶಿಮ್ಲಾ: ಹಿಮಾಚಲದ ಕಿನ್ನೌರ್ ಜಿಲ್ಲೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 200 ಮೀಟರ್ ಆಳದ ಸಟ್ಲೆಜ್ ನದಿಗೆ ಬಿದ್ದು ನಾಪತ್ತೆಯಾಗಿದ್ದ ಚೆನ್ನೈನ ಮಾಜಿ ಮೇಯರ್ ಪುತ್ರನ ಮೃತದೇಹ ಒಂಬತ್ತು ದಿನಗಳ ಬಳಿಕ ಸೋಮವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳಿನ ‘ಎಂದ್ರಾವತು ಒರು ನಾಲ್’ ಚಿತ್ರದ ನಿರ್ದೇಶಕ ವೆಟ್ರಿ ದುರೈಸಾಮಿ ಅವರು ಶಿಮ್ಲಾದಿಂದ ಸ್ಪಿತಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಫೆಬ್ರವರಿ 4 ರಂದು ಅವರ ಕಾರು ಅಪಘಾತಕ್ಕೀಡಾಗಿ ಸುಮಾರು ೨೦೦ ಅಡಿ ಆಳದ ಸಟ್ಲೆಜ್ ನದಿಗೆ ಬಿದ್ದಿತ್ತು ಈ ವೇಳೆ ಸಹ-ಪ್ರಯಾಣಿಕ ಗೋಪಿನಾಥ್ ಅವರನ್ನು ರಕ್ಷಿಸಲಾಗಿತ್ತು, ಅಲ್ಲದೆ ಕಾರು ಚಾಲಕ ತೇಂಜಿನ್ ಅಪಘಾತದಲ್ಲಿ ಮೃತಪಟ್ಟಿದ್ದು ಅವರ ಶವ ಪತ್ತೆಯಾಗಿತ್ತು. ಆದರೆ, 45 ವರ್ಷದ ವೆಟ್ರಿ ಎಲ್ಲಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಅಪಘಾತದಲ್ಲಿ ನಾಪತ್ತೆಯಾದ ಮಗನನ್ನು ಹುಡುಕಿ ಕೊಟ್ಟವರಿಗೆ 1 ಕೋಟಿ ರೂಪಾಯಿ ಬಹುಮಾನವನ್ನು ನೀಡುವುದಾಗಿ ವೆಟ್ರಿಯ ತಂದೆ ಸೈದೈ ದುರೈಸಾಮಿ ಘೋಷಿಸಿದ್ದರು.
ಅಪಘಾತ ನಡೆದಂದಿನಿಂದ ವೆಟ್ರಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ತಂಡಕ್ಕೆ ಸೋಮವಾರ ಅಪಘಾತ ನಡೆದ ಸ್ಥಳದಿಂದ ಸುಮಾರು ಮೂರೂ ಕಿಲೋಮೀಟರ್ ದೂರದಲ್ಲಿ ಸಟ್ಲೆಜ್ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹುನ್ ನಾಗ್ ಅಸೋಸಿಯೇಷನ್, ಸುಂದರ್‌ನಗರದ ಈಜು ತಜ್ಞರು ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ಕಿನ್ನೌರ್ ಉಪ ಆಯುಕ್ತ ಅಮಿತ್ ಕುಮಾರ್ ಶರ್ಮಾ ತಿಳಿಸಿದ್ದಾರೆ.
ಮೃತದೇಹವನ್ನು ಶಿಮ್ಲಾದ ಇಂದಿರಾಗಾಂಧಿ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನ್ಯಾಯಾಧೀಶರ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್… ವಕೀಲ ಅರೆಸ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.