Kolkata; ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅರೆನಗ್ನ ಶವ ಪತ್ತೆ: ಅತ್ಯಾಚಾರ ಆರೋಪ
ವ್ಯಾಪಕ ಆಕ್ರೋಶ.. ಬೀದಿಗಿಳಿದು ಪ್ರತಿಭಟನೆ
Team Udayavani, Aug 9, 2024, 8:14 PM IST
ಹೊಸದಿಲ್ಲಿ: ಕೋಲ್ಕತಾದ ಸರಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ (PGT) ವೈದ್ಯೆಯ ಅರೆ ನಗ್ನ ಶವ ಶುಕ್ರವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ದುರ್ದೈವಿ ದ್ವಿತೀಯ ವರ್ಷದ PGT ವಿದ್ಯಾರ್ಥಿಯಾಗಿದ್ದು, ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಳಗೆ ಗುರುವಾರ ರಾತ್ರಿ ಕರ್ತವ್ಯದಲ್ಲಿದ್ದ ವೇಳೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ದೇಹದ ಮೇಲೆ ಗಾಯದ ಗುರುತುಗಳಿವೆ. ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ. ಸತ್ಯವನ್ನು ಮರೆಮಾಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮೃತ ವೈದ್ಯೆಯ ತಂದೆ ಆರೋಪಿಸಿದ್ದಾರೆ.
“ಸಹ ವಿದ್ಯಾರ್ಥಿಗಳು ಶವವನ್ನು ಸೆಮಿನಾರ್ ಹಾಲ್‌ನಲ್ಲಿ ಪತ್ತೆ ಮಾಡಿದ್ದಾರೆ. ನಾವು ನಿನ್ನೆ ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯರು, ದಾದಿಯರು ಮತ್ತು ಇತರರೊಂದಿಗೆ ಮಾತನಾಡುತ್ತಿದ್ದೇವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವೈದ್ಯೆಯ ಪೋಷಕರಿಗೆ ದೂರವಾಣಿ ಕರೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವ್ಯಾಪಕ ಆಕ್ರೋಶ
ಮಹಿಳೆ ಪಿಜಿಟಿ ಸಾವಿನ ಕುರಿತು ತ್ವರಿತ ತನಿಖೆಗೆ ಒತ್ತಾಯಿಸಿ ಹಲವಾರು ವಿದ್ಯಾರ್ಥಿ ಸಂಘಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದೆ.
ಪ್ರತಿಪಕ್ಷ ಬಿಜೆಪಿ ಶಾಸಕಿ ಅಗ್ನಿಮಿತ್ರ ಪಾಲ್ ಸೇರಿದಂತೆ ಹಲವು ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಮ್ಯಾಜಿಸ್ಟ್ರೇಟ್ ಅಡಿಯಲ್ಲಿ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!
Pune: ಪಿಜ್ಜಾ ಆರ್ಡರ್ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು
Kerala: ದೇಗುಲ ಸಂಪ್ರದಾಯ ಬದಲು ಹಕ್ಕು ತಂತ್ರಿಗಳದ್ದು, ಸರ್ಕಾರದಲ್ಲ: ಕೇರಳ ಸಚಿವ
Abujhmad: ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲೀಯರ ಹತ್ಯೆ; ಓರ್ವ ಪೊಲೀಸ್ ಹುತಾತ್ಮ
UP: ವಿವಾಹದ ಮಧ್ಯೆ ಬಾತ್‌ರೂಮ್ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.