ಬೋಫೋರ್ಸ್: ಅರ್ಜಿ ವಾಪಸ್ ಪಡೆದ ಸಿಬಿಐ
Team Udayavani, May 17, 2019, 6:00 AM IST
ಹೊಸದಿಲ್ಲಿ,: ಮಹತ್ವದ ಬೆಳವಣಿಗೆಯಲ್ಲಿ, ಬೋಫೋರ್ಸ್ ಹಗರಣದ ಮರುತ ನಿಖೆಗೆ ಅವಕಾಶ ಕೋರಿ ದಿಲ್ಲಿ ನ್ಯಾಯಾಲಯಕ್ಕೆ ತಾನು ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ, ಗುರುವಾರ ಹಿಂಪಡೆದಿದೆ. ಆದರೆ, ಪ್ರಕರಣದ ಕುರಿತು ತನಿಖೆ ಮುಂದುವರಿಯಲಿದೆ ಎಂದೂ ಸ್ಪಷ್ಟಪಡಿಸಿದೆ.
2018ರ ಫೆ. 1ರಂದು ಸಲ್ಲಿಸಲಾಗಿದ್ದ ಅರ್ಜಿಯಲ್ಲಿ, ಬೋಫೋರ್ಸ್ ಪ್ರಕರಣಕ್ಕೆ ಹೊಸ ಸಾಕ್ಷ್ಯಾಧಾರಗಳು ದೊರಕಿ ರುವ ಕಾರಣ, ಪ್ರಕರಣದ ಮರು ತನಿಖೆಗೆ ಅವಕಾಶ ನೀಡ ಬೇಕೆಂದು ಕೋರಿತ್ತು. ಆದರೆ ಈಗ, ಪ್ರಕರಣದ ಮರುತನಿಖೆ ಬಗ್ಗೆ ತಾನು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಇನ್ನೂ ನಿರ್ಧರಿಸಿಲ್ಲವಾದ್ದರಿಂದ ಸದ್ಯದ ಮಟ್ಟಿಗೆ ಮರುತನಿಖೆಯ ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ. ನ್ಯಾಯಾಲಯವೂ ಇದಕ್ಕೆ ಸಮ್ಮತಿಸಿದೆ. ಹಿಂದೆ, ಪ್ರಕರಣದ ಆರೋಪಿಗಳನ್ನು ಖಲಾಸೆ ಮಾಡಿದ್ದ ದಿಲ್ಲಿ ಹೈಕೋರ್ಟ್‌ನ 2005ರ ತೀರ್ಪನ್ನು ಪ್ರಶ್ನಿಸಿ, 2018ರ ಫೆ. 2ರಂದು ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಐ ಅರ್ಜಿ ಸಲ್ಲಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.