ಪಾರಂಪರಿಕ ರೈಲಿನ ಇಂಜಿನ್ ಸ್ಫೋಟ, ಚಾಲಕರಿಬ್ಬರಿಗೆ ಗಾಯ
Team Udayavani, Dec 9, 2017, 3:58 PM IST
ಕೊಯಮುತ್ತೂರು : ನೀಲಗಿರಿ ಜಿಲ್ಲೆಯ ಹಿಲ್ಗ್ರೋವ್ ರೈಲ್ವೇ ಸ್ಟೇಶನ್ ಬಳಿ ಪಾರಂಪರಿಕ ರೈಲೊಂದರ ಬಾಯ್ಲರ್ ಅಛಾನಕ್ ಸ್ಫೋಟಗೊಂಡ ಪರಿಣಾಮವಾಗಿ ಇಬ್ಬರು ಲೋಕೋ ಪೈಲಟ್ಗಳು ಗಾಯಗೊಂಡ ದುರ್ಘಟನೆ ವರದಿಯಾಗಿದೆ.
ಆರು ಕೋಚ್ಗಳಿದ್ದ ನೀಲಗೀರೀಸ್ ಮೌಂಟೇನ್ ರೈಲ್ವೇ ಟ್ರೈನ್ನಲ್ಲಿ 120 ಮಂದಿ ಪ್ರಯಾಣಿಕರಿದ್ದರು. ಈ ಪಾರಂಪರಿಕ ರೈಲು ಇಂದು ಬೆಳಗ್ಗೆ 7 ಗಂಟೆಯ ಹೊತ್ತಿಗೆ ಮೆಟ್ಟುಪಾಳ್ಯಂನಿಂದ ಉದಕಮಂಡಲಕ್ಕೆ ಹೊರಟಿತ್ತು.
ಹಿಲ್ಗ್ರೋವ್ ರೈಲ್ವೇ ಸೇತುವೆಯ ಮೇಲಿದ್ದ ವೇಳೆ ರೈಲಿನ ಇಂಜಿನ್ನಲ್ಲಿ ಮಿಸ್ ಫಯರ್ನಿಂದಾಗಿ ದೋಷ ಕಂಡು ಬಂತು. ಆಗ ಲೋಕೋಪೈಲಟ್ಗಳಲ್ಲಿ ಒಬ್ಟಾತ ಇಂಜಿನ್ ಒತ್ತಡ ಏರಿಸಲು ಯತ್ನಿಸಿದ. ಆಗ ರೇಡಿಯೇಟರ್ನಿಂದ ಅಛಾನಕ್ ಆಗಿ ಬಿಸಿ ನೀರು ಚಿಮ್ಮಿತು. ಪರಿಣಾಮವಾಗಿ ಲೋಕೋ ಪೈಲಟ್ಗಳಾದ ಭೂಪತಿ ಮತ್ತು ಸತೀಶ್ ಅವರಿಗೆ ಸುಟ್ಟಗಾಯಗಳಾದವು.
ಒಡನೆಯೇ ಕೂನೂರ್ನಿಂದ ಒಂದು ಇಂಜಿನ್ ಮತ್ತು ಎರಡು ಕೋಚ್ಗಳನ್ನು ತರಿಸಿಕೊಳ್ಳಲಾಯಿತು. ಪ್ರಯಾಣಿಕರನ್ನು ಅವರ ಗಮ್ಯ ತಾಣಕ್ಕೆ ಒಯ್ಯಲಾಯಿತಲ್ಲದೆ ಗಾಯಾಳು ಲೋಕೋಪೈಲಟ್ಗಳನ್ನು ಸ್ಥಳಾಂತರಿಸಲಾಯಿತು ಎಂದು ರೈಲ್ವೇ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.