ರಾಹುಲ್ ಗಾಂಧಿಗೆ ಪಾರೀಕರ್ ತರಾಟೆ
Team Udayavani, Jan 31, 2019, 12:30 AM IST
ಪಣಜಿ: ಆರೋಗ್ಯ ಹೇಗಿದೆ ಎಂದು ವಿಚಾರಿಸುವ ನೆಪದಲ್ಲಿ ತಮ್ಮ ಭೇಟಿ ವಿಚಾರವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜಕೀಯ ಲಾಭಕ್ಕೆ ಬಳಸುತ್ತಿದ್ದಾರೆಂದು ಗೋವಾ ಮುಖ್ಯಮಂತ್ರಿ ಮನೋಹರ ಪಾರೀಕರ್ ಆರೋಪಿಸಿದ್ದಾರೆ. ರಾಹುಲ್ಗೆ ಬುಧವಾರ 2 ಪುಟಗಳ ಪತ್ರ ಬರೆದಿರುವ ಅವರು, ಮಂಗಳವಾರ 5 ನಿಮಿಷಗಳ ಭೇಟಿಯಲ್ಲಿ ರಫೇಲ್ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ವಿಚಾರ ಪ್ರಸ್ತಾಪವಾಗದಿದ್ದರೂ, ಆಗಿದೆ ಎಂದು ಹೇಳುವ ಮೂಲಕ ಸುಳ್ಳೇಕೆ ಹೇಳುತ್ತಿದ್ದೀರಿ ಎಂದು ರಾಹುಲ್ರನ್ನು ಪ್ರಶ್ನಿಸಿದ್ದಾರೆ. “ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೂ, ರಾಹುಲ್ ಗಾಂಧಿ ಯವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದೆ. ಆದರೆ ಅದನ್ನು ರಾಜಕೀಯ ಲಾಭಕ್ಕಾಗಿ ಬಳಕೆ ಮಾಡಿರುವುದು ಬೇಸರ ತಂದಿದೆ’ ಎಂದು ಬರೆದಿದ್ದಾರೆ.
ಪಾರೀಕರ್ ಭೇಟಿ ಬಳಿಕ ಕೊಚ್ಚಿಗೆ ತೆರಳಿದ್ದ ರಾಹುಲ್, “ರಫೇಲ್ ಒಪ್ಪಂದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಪಾರೀಕರ್ನನ್ನೊಂದಿಗೆ ಹೇಳಿದರು’ ಎಂದು ಹೇಳಿದ್ದರು.
ಜೋಶ್, ಹೋಶ್ ಎರಡೂ ಇದೆ: ಈ ನಡುವೆ ಬುಧವಾರ ಮೂಗಿಗೆ ಪೈಪ್ ಹಾಕಿಕೊಂಡು, ಕುಳಿತೇ ಗೋವಾ ಬಜೆಟ್ ಮಂಡಿಸಿದ ಪಾರೀಕರ್ಪೂರ್ಣ ಪ್ರಮಾಣದ ಉತ್ಸಾಹ (ಜೋಶ್) ದಿಂದಲೇ ಬಜೆಟ್ ಮಂಡಿಸುತ್ತಿದ್ದೇನೆ. ಅದರ ಜತೆಗೆ ತಮಗೆ ಎಚ್ಚರಿಕೆಯ (ಹೋಶ್) ಅರಿವೂ ಇದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.