Botswana; 2,492 ಕ್ಯಾರಟ್ ವಜ್ರ ಪತ್ತೆ: ಬೆಲೆ ಎಷ್ಟು ಗೊತ್ತೇ?
Team Udayavani, Aug 24, 2024, 6:24 AM IST
ಹೊಸದಿಲ್ಲಿ: ವಿಶ್ವದಲ್ಲೇ 2ನೇ ಅತೀದೊಡ್ಡ ವಜ್ರ ಎನಿಸಿಕೊಂಡಿರುವ ವಜ್ರದ ಕಲ್ಲೊಂದು ಬೋಟ್ಸ್ವಾನಾದ ಗಣಿಯಲ್ಲಿ ಪತ್ತೆಯಾಗಿದೆ. 2,492 ಕ್ಯಾರಟ್ ಹೊಂದಿರುವ ಈ ವಜ್ರದ ಆರಂಭಿಕ ಬೆಲೆಯೇ 330 ಕೋಟಿ ರೂ. ಇರಲಿದೆ ಎಂದು ಮಾಧ್ಯಮ ವೊಂದು ವರದಿ ಮಾಡಿದೆ.
ಈಗಾಗಲೇ ಈ ವಜ್ರವನ್ನು ಕೊಂಡುಕೊಳ್ಳಲು ಹಲವು ಕಂಪೆನಿಗಳು ಸಿದ್ಧತೆ ನಡೆಸಿರುವುದರಿಂದ ಇದರ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಬೋಟ್ಸ್ವಾನಾದಲ್ಲಿ ಈವರೆಗೆ ದೊರೆತ ಅತೀ ದೊಡ್ಡ ವಜ್ರದ ಕಲ್ಲು ಎನಿಸಿಕೊಂಡಿದ್ದು, ಕಳೆದ 100 ವರ್ಷಗಳಲ್ಲೇ ಪತ್ತೆಯಾದ ಬೃಹತ್ ವಜ್ರವಾಗಿದೆ. ಈ ವಜ್ರವನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಬೋಟ್ಸ್ ವಾನಾ ಸರಕಾರ ಘೋಷಿಸಿದೆ.
2019ರಲ್ಲಿ ಇದೇ ಗಣಿಯಲ್ಲಿ ಪತ್ತೆ ಯಾಗಿದ್ದ 1758 ಕ್ಯಾರಟ್ನ ವಜ್ರವನ್ನು 2ನೇ ಅತಿದೊಡ್ಡ ವಜ್ರ ಎಂದು ಗುರುತಿಸಲಾಗಿತ್ತು. ಇದನ್ನು ಫ್ರೆಂಚ್ ಫ್ಯಾಷನ್ ಹೌಸ್ ಲೂಯಿ ವಿಟ್ಟಾನ್ ಸಂಸ್ಥೆ ಖರೀದಿ ಮಾಡಿತ್ತು, ಆದರೆ ಬೆಲೆಯನ್ನು ಬಹಿರಂಗಪಡಿಸಿರಲಿಲ್ಲ. 1905ರಲ್ಲಿ ದಕ್ಷಿಣ ಆಫ್ರಿಕಾದ ಕಲ್ಲಿನಾಲ್ನಲ್ಲಿ 3106 ಕ್ಯಾರಟ್ನ ವಜ್ರ ಪತ್ತೆಯಾಗಿತ್ತು, ಇದು ವಿಶ್ವದ ಅತೀದೊಡ್ಡ ವಜ್ರ ಎನಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.