ಬ್ರಹ್ಮೋಸ್ 4 ಸಾವಿರ ಕೋಟಿ ರೂ. ಸಂಸ್ಥೆ!
Team Udayavani, Jun 8, 2019, 6:00 AM IST
ನವದೆಹಲಿ: ಭಾರತ ಮತ್ತು ರಷ್ಯಾ ಮಧ್ಯದ ಒಪ್ಪಂದದ ಮೂಲಕ ಆರಂಭವಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿ ತಯಾರಿಕೆ ಘಟಕ ಈಗ 40 ಸಾವಿರ ಕೋಟಿ ರೂ. ಮೌಲ್ಯದ್ದಾಗಿ ರೂಪುಗೊಂಡಿದೆ. ಈ ಸಂಸ್ಥೆ 1998ರಲ್ಲಿ 1300 ಕೋಟಿ ರೂ. ಬಂಡವಾಳದಲ್ಲಿ ಶುರುವಾಗಿತ್ತು. ಆಗ ರಷ್ಯಾದ ಎನ್ಪಿಒ ಮಶಿನೋ ಸ್ತ್ರೊಯೆನಿಯಾ ಹಾಗೂ ಡಿಆರ್ಡಿಒ ಜೊತೆಗೆ ಒಪ್ಪಂದ ಮಾಡಿಕೊಂಡು ಸಂಸ್ಥೆ ಸ್ಥಾಪಿಸಲಾಗಿತ್ತು.
ಬ್ರಹ್ಮೋಸ್ ಏರೋಸ್ಪೇಸ್ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಮಿಶ್ರಾ ಈ ಬಗ್ಗೆ ವಿಚಾರ ಸಂಕಿರಣದಲ್ಲಿ ಮಾತನಾಡಿದ್ದು, ಇನ್ನಷ್ಟು ಕ್ಷೇತ್ರಗಳಲ್ಲಿ ನಾವು ಸೂಪರ್ಸಾನಿಕ್ ಕ್ಷಿಪಣಿ ಯೋಜನೆಗಳ ರೀತಿಯಲ್ಲೇ ಹೆಜ್ಜೆಯಿಡಬೇಕಿದೆ. ಇದರಿಂದ ದೇಶದ ರಕ್ಷಣೆ ಹಾಗೂ ಇತರ ವಿಭಾಗಗಳಲ್ಲಿನ ಪರಿಣಿತಿ ಮತ್ತು ಕೌಶಲ ವೃದ್ಧಿಸುತ್ತದೆ ಎಂದಿದ್ದಾರೆ.
ರಷ್ಯಾದ ವಿಜ್ಞಾನಿಗಳಿಗೂ ನಾವು ಸಹಾಯ ಮಾಡಿದ್ದೇವೆ. ಈಗ ನಮ್ಮೊಂದಿಗೆ 200 ಕಂಪನಿಗಳು ವಹಿವಾಟು ನಡೆಸುತ್ತಿವೆ. ನೇರವಾಗಿ ಹಾಗೂ ಪರೋಕ್ಷವಾಗಿ 20 ಸಾವಿರಕ್ಕೂ ಹೆಚ್ಚು ಜನ ರಿಗೆ ಉದ್ಯೋಗ ದೊರಕಿದೆ ಎಂದೂ ಸುಧೀರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.