ಯುದ್ಧ ಬಳಕೆಗೆ ಬ್ರಹ್ಮೋಸ್ ಸಿದ್ಧ
Team Udayavani, Jun 17, 2020, 8:10 AM IST
ಹೊಸದಿಲ್ಲಿ: ವಾಯುಪಡೆಯ ಪ್ರಬಲ ಬತ್ತಳಿಕೆ ಬ್ರಹ್ಮೋಸ್ ಕ್ಷಿಪಣಿಗೆ “ಫ್ಲೀಟ್ ರಿಲೀಸ್ ಕ್ಲಿಯರೆನ್ಸ್’ ಪ್ರಮಾಣೀಕರಣ ಲಭಿಸಿದೆ. ಇದರಿಂದಾಗಿ ಯಾವುದೇ ಯುದ್ಧ ಸನ್ನಿವೇಶಗಳಲ್ಲಿ ವಾಯುಪಡೆ ಬ್ರಹ್ಮೋಸ್ ಕ್ಷಿಪಣಿಯನ್ನು ಬಳಸಬಹುದಾಗಿದೆ. “ಯುದ್ಧ ಕಾರ್ಯಾಚರಣೆಯಲ್ಲಿ ಬ್ರಹ್ಮೋಸ್ ಉಡಾಯಿಸಲು ಐಎಎಫ್ ನ ಪೈಲಟ್‌ಗಳಿಗೆ ಈ ಪ್ರಮಾಣೀಕರಣ ಅನುಕೂಲ ಮಾಡಿಕೊಟ್ಟಿದೆ’ ಎಂದು ಬ್ರಹ್ಮೋಸ್ ಕಾರ್ಪೊರೇಷನ್ ತಿಳಿಸಿದೆ.
ಸಂದಿಗ್ಧ ಸಮಯದಲ್ಲಿ ಮಾತ್ರವೇ ಯಾವುದೇ ಕ್ಷಿಪಣಿಗೆ “ಫ್ಲೀಟ್ ರಿಲೀಸ್ ಕ್ಲಿಯರೆನ್ಸ್’ ನೀಡಲಾಗುತ್ತದೆ. ಬ್ರಹ್ಮೋಸ್ ಸೂಪರ್‌ಸಾನಿಕ್ ನೌಕಾಕ್ಷಿಪಣಿಯು ಸುಖೋಯ್- 30 ಎಂಕೆಐ ಯುದ್ಧ ವಿಮಾನದ ಮೂಲಕ ತಂಜಾವೂರಿನ ಐಎಎಫ್ ವಾಯುನೆಲೆಗೆ ಜನವರಿ ತಿಂಗಳಿನಲ್ಲಿಯೇ ಸೇರ್ಪಡೆಗೊಂಡಿತ್ತು. 300 ಕಿ.ಮೀ. ಗಮ್ಯದ ದಾಳಿ ಸಾಮರ್ಥ್ಯ ಈ ಕ್ಷಿಪಣಿಗಿದೆ. ಸುಖೋಯ್- 30 ಎಂಕೆಐ ಅತ್ಯಾಧುನಿಕ ಬಹುಪಾತ್ರದ ಫೈಟರ್ ವಿಮಾನವಾಗಿದ್ದು, ವಾಯು, ನೆಲ ಮತ್ತು ಕಡಲ ಮೇಲಿನ ಕಾರ್ಯಾಚರಣೆಯ ವಿಶೇಷ ಸಾಮರ್ಥ್ಯವನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.