First Time:ಸುಖೋಯಿ ಮೂಲಕ ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ
Team Udayavani, Nov 22, 2017, 3:50 PM IST
ಹೊಸದಿಲ್ಲಿ : ವಿಶ್ವದ ಅತೀ ವೇಗದ ಸೂಪರ್ಸಾನಿಕ್ ಕ್ರೂಯಿಸ್ ಮಿಸೈಲ್ ಬ್ರಹ್ಮೋಸ್ ಇಂದು ಬುಧವಾರ ಪ್ರಪ್ರಥಮ ಬಾರಿಗೆ ಭಾರತೀಯ ವಾಯು ಪಡೆಯ ಸುಖೋಯಿ-30 ಎಂಕೆಐ ಫೈಟರ್ ಜೆಟ್ ಮೂಲಕ ಯಶಸ್ವೀ ಪರೀಕ್ಷಾರ್ಥ ಉಡ್ಡಯನದೊಂದಿಗೆ ಹೊಸ ಇತಿಹಾಸವನ್ನು ಸೃಷ್ಟಿಸಿತು.
ಎಸ್ಯು-30 ಫ್ಯೂಸ್ಲೇಜ್ನಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಗುರುತ್ವಾಕರ್ಷ ಪತನ ಪ್ರಯೋಗ ನಡೆಸಲಾಯಿತು. ಎರಡು ಹಂತಗಳ ಈ ಕ್ಷಿಪಣಿಯ ಇಂಜಿನ್ ಬಂಗಾಲ ಕೊಲ್ಲಿಯಲ್ಲಿನ ತನ್ನ ಉದ್ದೇಶಿತ ಗುರಿಯತ್ತ ಧಾವಿಸಿತು.
ಸುಖೋಯಿ ಫೈಟರ್ ಜೆಟ್ ಮೂಲಕ ಆಗಸಕ್ಕೆ ಒಯ್ಯಲ್ಪಡುವ ಸೂಪರ್ಸಾನಿಕ್ ಕ್ರೂಯಿಸ್ ಬ್ರಹ್ಮೋಸ್ ಮಿಸೈಲ್ ನ ಇಂದಿನ ಯಶಸ್ವೀ ಪ್ರಾಯೋಗಿಕ ಚೊಚ್ಚಲ ಪರೀಕ್ಷೆಯಿಂದಾಗಿ ಭಾರತೀಯ ವಾಯು ಪಡೆಯ ಯುದ್ಧ ಸಾಮರ್ಥಯಕ್ಕೆ ಹೊಸ ಆಯಾಮ ಲಭಿಸಿತು.
2.5 ಟನ್ ತೂಕ ಹೊಂದಿರುವ ಬ್ರಹ್ಮೋಸ್ ಎಎಲ್ಸಿಎಂ ಕ್ಷಿಪಣಿಯು ಭಾರತದ ಎಸ್ಯು3- ಫೈಟರ್ ಜೆಟ್ ಮೂಲಕ ನಿಯೋಜಿಸಲ್ಪಡುವ ಅತ್ಯಂತ ಭಾರದ ಶಸ್ತ್ರವಾಗಿದೆ. ಘನ ಶಸ್ತ್ರಾಸ್ತ್ರ ಗಳನ್ನು ಒಯ್ಯುವುದಕ್ಕೆ ಅನುಕೂಲವಾಗುವಂತೆ ಎಚ್ಎಎಲ್ ಇದನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.
ಭಾರತದ ಡಿಆರ್ಡಿಓ ಮತ್ತು ರಶ್ಯದ ಎನ್ಪಿಓಎಂ ನ ಜಂಟಿ ಸಾಹಸದಲ್ಲಿ ಬ್ರಹ್ಮೋಸ್ ಹೊಸ ರೂಪ ಮತ್ತು ಭೀಮಬಲವನ್ನು ತಳೆದಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಎರಡೂ ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.