ಕುಲಾಂತರಿ ಬೆಳೆಗಳು ಅಪಾಯಕಾರಿ ಎಂದ ಬ್ರೆಜಿಲ್
Team Udayavani, Feb 28, 2017, 3:50 AM IST
ನವದೆಹಲಿ: ಕುಲಾಂತರಿ ತಳಿಗಳ ಅಪಾಯ ಮತ್ತು ಅನಿಶ್ಚಿತತೆಗಳನ್ನು ಬ್ರೆಜಿಲ್ ಸರ್ಕಾರದ ಸಂಸ್ಥೆಯೊಂದು ಎತ್ತಿಹಿಡಿದಿದ್ದು, ಈ ಕುರಿತು ಭಾರತೀಯರು ಸೇರಿದಂತೆ ಹಲವರು ನಡೆಸಿದ ಸುಮಾರು 750 ಅಧ್ಯಯನಗಳನ್ನು ಇದಕ್ಕೆ ಪೂರಕವಾಗಿ ನೀಡಿದೆ. ಕುಲಾಂತರಿ ತಳಿಗಳನ್ನು ಬೆಳೆಯುವ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿರುವ ಬ್ರೆಜಿಲ್ ಈಗ ಕುಲಾಂತರಿ ವಿರುದ್ಧ ವರದಿ ತಯಾರಿಸಿದೆ.
ಭಾರತದಲ್ಲಿ ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದನ್ನು ಖಂಡಿಸಿ ಕುಲಾಂತರಿ ವಿರೋಧಿ ಹೋರಾಟಗಾರರು ಪ್ರತಿಭಟಿಸಲು ಮುಂದಾಗಿರುವಾಗಲೇ ಈ ವರದಿ ಬಹಿರಂಗಗೊಂಡಿರುವುದು ವಿಶೇಷ. “ಕುಲಾಂತರಿ ಬೆಳೆಗಳಿಂದಾಗುವ ಅಪಾಯಗಳು ಮತ್ತು ಅನಿಶ್ಚಿತತೆಗಳು: 750 ಅಧ್ಯಯನಗಳು ಸಾಬೀತುಪಡಿಸಿರುವ ಅಂಶ’ ಎಂಬ ವರದಿಯನ್ನು ಬ್ರೆಜಿಲ್ ದೇಶದ ಕೌಟುಂಬಿಕ ಕೃಷಿ ಮತ್ತು ಕೃಷಿ ಅಭಿವೃದ್ಧಿ ವಿಶೇಷ ಕಾರ್ಯಾಲಯವು ಹೊರತಂದಿದೆ. 1980ರಿಂದ 2015ನೇ ಇಸವಿಯ ಅವಧಿಯಲ್ಲಿ ನಡೆದ ಅಧ್ಯಯನಗಳನ್ನು ಈ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಈ ಪೈಕಿ ಭಾರತದ ಹಸಿರು ಕ್ರಾಂತಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದ ತಳಿ ವಿಜ್ಞಾನಿ ಎಂ. ಸ್ವಾಮಿನಾಥನ್ ಅವರ ಅಧ್ಯಯನ ವರದಿಯೂ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.