ಮೆಟ್ರೋ: ಟೋಕನ್ ವ್ಯವಸೆಗೆ ಬ್ರೇಕ್?
ಲಾಕ್‌ಡೌನ್ ತೆರವು ಬಳಿಕ ಸ್ಮಾರ್ಟ್‌ಕಾರ್ಡ್ ಕಡ್ಡಾಯಗೊಳಿಸಲು ಚಿಂತನೆ
Team Udayavani, May 1, 2020, 10:21 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ನೀವು ಮೆಟ್ರೋ ಪ್ರಯಾಣ ಮಾಡುವವರಾ? ಹಾಗಿದ್ದರೆ ಇಲ್ಲಿ ಕೇಳಿ. ಇನ್ನು ಮುಂದೆ ಮೆಟ್ರೋದಲ್ಲಿ ಪ್ರಯಾಣಿಸಲು ಟೋಕನ್ ವ್ಯವಸ್ಥೆ ಇರುವುದಿಲ್ಲ. ಪ್ರಯಾಣಿಸಬೇಕೆಂದರೆ, ನೀವು ಸ್ಮಾರ್ಟ್‌ಕಾರ್ಡ್ ಖರೀದಿಸಲೇಬೇಕು! ಇಂಥದ್ದೊಂದು ನಿಯಮ ತಾತ್ಕಾಲಿಕವಾಗಿ ಜಾರಿಯಾಗುವ ಸಾಧ್ಯತೆ ಅಧಿಕವಾಗಿದೆ ಎನ್ನುತ್ತವೆ ಮೂಲಗಳು. ಹೀಗಾದರೆ ಮೆಟ್ರೋ ನಗರಿ ಬೆಂಗಳೂರಿನ ಮೇಲೂ ಪರಿಣಾಮ ಬೀರಲಿದೆ.
ವೈರಸ್ ತಡೆಯುವುದೇ ಗುರಿ
ವೈರಸ್ ವ್ಯಾಪಿಸುವುದನ್ನು ತಡೆಯುವ ಸಲುವಾಗಿ ಟೋಕನ್ ವ್ಯವಸ್ಥೆ (ಏಕಮುಖ ಪ್ರಯಾಣ ಟಿಕೆಟ್) ಯನ್ನೇ ರದ್ದು ಮಾಡಿ, ಮೆಟ್ರೋ ಪ್ರಯಾಣಿಕರೆಲ್ಲರಿಗೂ ಸ್ಮಾರ್ಟ್‌ಕಾರ್ಡ್ ಕಡ್ಡಾಯ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು “ದ ಹಿಂದುಸ್ಥಾನ್ ಟೈಮ್ಸ…’ ವರದಿ ಮಾಡಿದೆ. ಸ್ಮಾರ್ಟ್‌ಕಾರ್ಡ್ ಅನ್ನು ಒಮ್ಮೆ ಖರೀದಿಸಿದರೆ, ಆನ್‌ಲೈನ್ ಮೂಲಕವೂ ರೀಚಾರ್ಜ್ ಮಾಡುತ್ತಿರ ಬಹುದು. ಆದರೆ, ಟೋಕನ್ ವ್ಯವಸ್ಥೆಯಿದ್ದರೆ ಜನರು ಟೋಕನ್‌ಗಾಗಿ ಸರತಿಯಲ್ಲಿ ನಿಲ್ಲಬೇಕಾಗುತ್ತದೆ. ಈ ರೀತಿಯ ಸರತಿ ಸಾಲಲ್ಲಿ ಸೋಂಕು ವ್ಯಾಪಿ ಸುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಈ ಎಲ್ಲ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು, ಸೂಕ್ತ ಮಾರ್ಗಸೂಚಿಯನ್ನು ಸಚಿವಾಲಯ ರಚಿಸುತ್ತಿದೆ ಎಂದೂ ವರದಿ ಹೇಳಿದೆ.
ಬೆಂಗಳೂರಿನಲ್ಲೂ ಟೋಕನ್ ಇರಲ್ಲ!
ಮೇ 3ರ ನಂತರ ದೇಶವ್ಯಾಪಿ ದಿಗ್ಬಂಧನವನ್ನು ಹಂತಹಂತವಾಗಿ ಸಡಿಲಿಸುತ್ತಾ ಬರಲಾಗುತ್ತದೆ ಎಂಬ ಸುದ್ದಿಗಳ ನಡುವೆಯೇ ಮೆಟ್ರೋಗೆ ಸಂಬಂಧಿಸಿ ಇಂಥದ್ದೊಂದು ಸುದ್ದಿ ಕೇಳಿಬರುತ್ತಿದೆ. ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ ಸೇರಿದಂತೆ ಮೆಟ್ರೋ ಸೇವೆ ಎಲ್ಲೆಲ್ಲಿವೆಯೋ, ಅಲ್ಲೆಲ್ಲ ನಿಧಾನವಾಗಿ ಸೇವೆ ಪುನಾರಂಭಗೊಳ್ಳುವ ಸಾಧ್ಯತೆಯಿದೆ. ಆದರೆ, ಮುಂಜಾಗ್ರತಾ
ಕ್ರಮವಾಗಿ ಟೋಕನ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಚಿಂತನೆ ನಡೆದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.