ಬ್ಲೂವೇಲ್‌ಗೆ ಬ್ರೇಕ್: ಕೇಂದ್ರ ಸರಕಾರದಿಂದ ಕಠಿನ ಕ್ರಮ
Team Udayavani, Aug 16, 2017, 7:34 AM IST
ಹೊಸದಿಲ್ಲಿ: ಮಕ್ಕಳನ್ನು ಬಲಿತೆಗೆದುಕೊಳ್ಳುತ್ತಿರುವ “ಸಾವಿನ ಆಟ’ ಭಾರತಕ್ಕೂ ಕಾಲಿಟ್ಟಿರುವುದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರ ಈಗ ಬ್ಲೂವೇಲ್ ಚಾಲೆಂಜ್‌ನ ಲಿಂಕ್ ಅನ್ನು ತತ್‌ಕ್ಷಣನೇ ತೆಗೆದುಹಾಕಿ ಎಂದು ಇಂಟರ್ನೆಟ್ ದಿಗ್ಗಜ ಕಂಪೆನಿಗಳಿಗೆ ಆದೇಶಿಸಿದೆ.
ಗೂಗಲ್, ಫೇಸ್‌ಬುಕ್, ವಾಟ್ಸ್ ಆ್ಯಪ್, ಇನ್‌ಸ್ಟಾಗ್ರಾಂ, ಮೈಕ್ರೋಸಾಫ್ಟ್ ಮತ್ತು ಯಾಹೂಗಳಿಗೆ ಈ ಸೂಚನೆ ನೀಡಿರುವ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, “ಬ್ಲೂವೇಲ್‌ನಿಂದಾಗಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಮಾರಕ ಆಟವನ್ನು ಕೂಡಲೇ ತೆಗೆದುಹಾಕಿ’ ಎಂದು ಹೇಳಿದೆ. ಕೇಂದ್ರ ಕಾನೂನು ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರ ಆದೇಶದ ಮೇರೆಗೆ ಆ.11ರಂದೇ ಈ ಸೂಚನೆ ನೀಡಲಾಗಿದೆ.
50 ದಿನಗಳವರೆಗೆ ವಿವಿಧ ಅಪಾಯಕಾರಿ ಟಾಸ್ಕ್ಗಳನ್ನು ಕೊಡುವ ಈ ಆಟದಿಂದಾಗಿ ಮುಂಬಯಿ ಮತ್ತು ಪ. ಬಂಗಾಲದಲ್ಲಿ ಈಗಾಗಲೇ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಲ್ಲದೆ ಸಾವಿಗೆ ಶರಣಾಗಲು ಹೊರಟಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ಈ ಘಟನೆಗಳ ಬಳಿಕ ದೇಶಾದ್ಯಂತ ಆತಂಕದ ಅಲೆ ಸೃಷ್ಟಿಯಾಗಿದ್ದು, ಈ ಆಟಕ್ಕೆ ನಿಷೇಧ ಹೇರುವಂತೆ ಕೋರಿ ಕೇರಳ ಸಿಎಂ ಪಿಣರಾಯಿ ವಿಜಯನ್ ಸಹಿತ ಹಲವು ಗಣ್ಯರು ಪ್ರಧಾನಿ ಮೋದಿ ಅವರನ್ನು ಕೇಳಿಕೊಂಡಿದ್ದರು. ಈ ಗೇಮ್ ವಿದೇಶಗಳಲ್ಲಿ ಈಗಾಗಲೇ 200ಕ್ಕೂ ಹೆಚ್ಚು ಮಕ್ಕಳನ್ನು ಬಲಿಪಡೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.