ವಿಮಾನ ಮೂಲಕ ತಿಂಗಳ ಮಗುವಿಗೆ ಎದೆ ಹಾಲು ರವಾನೆ
Team Udayavani, Jul 18, 2020, 8:56 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಒಂದು ತಿಂಗಳ ಮಗು ನವದೆಹಲಿಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದೆ. ಅದರ ಆಹಾರವಾಗಿರುವ ತಾಯಿಯ ಎದೆ ಹಾಲು 1 ಸಾವಿರ ಕಿಮೀ ದೂರದ ಲೇಹ್ನಿಂದ ಪ್ರತಿ ದಿನ ವಿಮಾನದಲ್ಲಿ ಬರುತ್ತದೆ.
ಏನಿದು ವಿಚಾರ ಎಂಬ ಕುತೂಹಲವೇ? ಸಿಸೇರಿಯನ್ ಮೂಲಕ ತಿಂಗಳ ಹಿಂದೆ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಅದಕ್ಕೆ ಕೊಂಚ ತೊಂದರೆ ಉಂಟಾಗಿರುವ ಹಿನ್ನೆಲೆಯಲ್ಲಿ ಮಗುವಿಗೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿತ್ತು. ಹೀಗಾಗಿ, ಮಗುವನ್ನು ಹೊಸದಿಲ್ಲಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಿಸೇರಿಯನ್ ಮೂಲಕ ಹೆರಿಗೆ ಆದ ಕಾರಣ ಮಗುವಿನ ತಾಯಿ ಲೇಹ್ನಲ್ಲಿಯೇ ಉಳಿದು ವಿಶ್ರಾಂತಿ ಪಡೆಯುತ್ತಿದ್ದಾರೆ. ಮಗುವಿನ ತಂದೆ ಜಿಕ್ವೆುಟ್ ವಾಂಗ್ದು ಅವರ ಸ್ನೇಹಿತ ನಿತ್ಯವೂ ಮಗುವಿನ ಮನೆಗೆ ಹೋಗಿ ಎದೆ ಹಾಲನ್ನು ಡಬ್ಬದ ಮೂಲಕ ಏರ್ಪೋರ್ಟ್ಗೆ ತರುತ್ತಾರೆ.
ಪ್ರತಿ ದಿನ ವಿಮಾನ ನಿಲ್ದಾಣದಿಂದ ಹೊಸದಿಲ್ಲಿಗೆ ಅದನ್ನು ತರಲಾಗುತ್ತದೆ. ಆಸ್ಪತ್ರೆಯಲ್ಲಿರುವ ಮಗುವಿನ ತಂದೆ ದೆಹಲಿ ಏರ್ಪೋರ್ಟ್ಗೆ ಹೋಗಿ ಡಬ್ಬ ಪಡೆದು ಕೊಂಡು ಮಗುವಿಗೆ ನೀಡುತ್ತಾರೆ. ಸಿಬ್ಬಂದಿಯ ಸಹಕಾರದಿಂದ ಈ ಕಾಯಕ ನಿತ್ಯ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.