ಗೋವಾ ನಿರ್ಣಯ ಆಧರಿಸಿ ಬ್ರಿಕ್ಸ್ ಮಾತುಕತೆ: ಪ್ರಧಾನಿ
Team Udayavani, Sep 3, 2017, 11:10 AM IST
ಹೊಸದಿಲ್ಲಿ /ಬೀಜಿಂಗ್: ಭಾರತ ಮತ್ತು ಚೀನ ನಡುವೆ ಕೆಲ ದಿನಗಳ ಹಿಂದಷ್ಟೇ ಮುಕ್ತಾಯವಾದ ಡೋಕ್ಲಾಂ ವಿವಾದದ ನಡುವೆಯೇ ನೆರೆಯ ರಾಷ್ಟ್ರದ ಕ್ಸಿಯಾಮೆನ್‌ನಲ್ಲಿ ಬ್ರಿಕ್ಸ್ ರಾಷ್ಟ್ರಗಳ ಸಮಾವೇಶ ನಡೆಯಲಿದೆ. ಹಾಲಿ ಸಮಾವೇಶದಿಂದ ಉತ್ತಮ ಫಲಿತಾಂಶ ನಿರೀಕ್ಷಿಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಗೋವಾದಲ್ಲಿ ಆಯೋಜಿಸಲಾಗಿದ್ದ ಸಮ್ಮೇಳನದ ನಿರ್ಣಯಗಳ ಆಧಾರದ ಮೇಲೆ ಕ್ಸಿಯಾಮ್‌ನಲ್ಲಿ ಉತ್ತಮ ರೀತಿಯ ಚರ್ಚೆಗಳು ನಡೆಯಲಿವೆ ಎಂದು ಪೂರ್ವಭಾವಿಯಾಗಿ ಫೇಸ್‌ಬುಕ್‌ನಲ್ಲಿ ಬರೆದು ಕೊಂಡಿರುವ ಪೋಸ್ಟ್‌ನಲ್ಲಿ ಪ್ರಧಾನಿ ತಿಳಿಸಿದ್ದಾರೆ. ಚೀನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬ್ರಿಕ್ಸ್ ಸಮ್ಮೇಳನದಿಂದಾಗಿ ಸದಸ್ಯ ರಾಷ್ಟ್ರಗಳ ನಡುವೆ ಉತ್ತಮ ಭಾಗೀದಾರಿಕೆ ಮತ್ತಷ್ಟು ಬಲಗೊಳ್ಳಲಿದೆ ಎಂದೂ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಬ್ರಿಕ್ಸ್ ರಾಷ್ಟ್ರಗಳಲ್ಲಿ ಭಾರತದ ಪ್ರಾಮುಖ್ಯತೆ ವಿವರಿಸಿದ ಪ್ರಧಾನಿ ಮೋದಿ ಶಾಂತಿ ಮತ್ತು ಅಭಿವೃದ್ಧಿಗಾಗಿ ಎರಡನೇ ದಶಕಗಳನ್ನು ಆರಂಭಿಸಿದೆ. ವಿವಿಧ ರಾಷ್ಟ್ರಗಳ ಜತೆಗಿನ ನಾಯಕರ ಜತೆಗಿನ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಆಯಾ ರಾಷ್ಟ್ರಗಳ ನಡುವೆ ಹೊಂದಿರುವ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಮುಂದಾಗುವುದಾಗಿ ಬರೆದುಕೊಂಡಿದ್ದಾರೆ. ವಿಶ್ವಶಾಂತಿ ಮತ್ತು ಜಗತ್ತಿನ ಸವಾಲುಗಳನ್ನು ಎದುರಿಸಲು ಬ್ರಿಕ್ಸ್ ರಾಷ್ಟ್ರಗಳು ಉತ್ತಮ ವೇದಿಕೆಯಾಗಿದೆ ಎಂದು ಹೇಳಿಕೊಂಡಿದ್ದಾರೆ ಪ್ರಧಾನಿ.
ಬ್ಯುಸಿನೆಸ್ ಕೌನ್ಸಿಲ್‌ನಲ್ಲಿ ಮಾತು: ಬ್ರಿಕ್ಸ್ ರಾಷ್ಟ್ರಗಳ ಬ್ಯುಸಿನೆಸ್ ಕೌನ್ಸಿಲ್‌ನಲ್ಲಿಯೂ ಭಾರತ ಜಗತ್ತಿನ ಹಾಗೂ ದಕ್ಷಿಣ ಏಷ್ಯಾದ ಆದ್ಯತೆಗಳ ಬಗ್ಗೆ ಮಾತನಾಡಲಿದೆ ಎಂದಿದ್ದಾರೆ.
ಮೊದಲ ಭೇಟಿ: ಭಾರತ ಮತ್ತು ಚೀನ ನಡುವೆ 73 ದಿನಗಳ ಡೋಕ್ಲಾಂ ವಿವಾದ ಬಳಿಕ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ. ಎರಡೂ ರಾಷ್ಟ್ರಗಳೂ ಕೂಡ ಸರಕಾರಿ ಮುಖ್ಯಸ್ಥರ ಭೇಟಿಯನ್ನು ನಿರಾಕರಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.