ಅಬ್ಬಾ ಭಾರತದ ಈ ರೈಲ್ವೆ ಬ್ರಿಡ್ಜ್ ಐಫೆಲ್ ಟವರ್ ಅನ್ನೂ ಮೀರಿಸಲಿದೆ!
Team Udayavani, May 3, 2017, 6:38 PM IST
ನವದೆಹಲಿ:ಜಮ್ಮು-ಕಾಶ್ಮೀರದ ಉತ್ತರ ಭಾಗದ ಚೆನಾಬ್ ನದಿ ದಡದ ಮೇಲೆ ಅತೀ ಎತ್ತರದ ರೈಲ್ವೆ ಸೇತುವೆ ನಿರ್ಮಾಣವಾಗುತ್ತಿದ್ದು, ಇದು ಪ್ಯಾರಿಸ್ ನ ಐಫೆಲ್ ಟವರ್ ಗಿಂತಲೂ ಸುಮಾರು 35 ಮೀಟರ್ ಎತ್ತರವಿರಲಿದೆ ಎಂದು ಅಂದಾಜಿಸಲಾಗಿದೆ. 2019ಕ್ಕೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದು ಜಗತ್ತಿನ ಅತೀ ಎತ್ತರದ ರೈಲ್ವೆ ಸೇತುವೆಯಾಗಲಿದೆ.
1.3ಕಿಲೋ ಮೀಟರ್ ಉದ್ದದ ಈ ಅದ್ಭುತ ಕಾಮಗಾರಿಯ ಸೇತುವೆ ಜಮ್ಮುವಿನ ಬಕ್ಕಾಲ್ ಮತ್ತು ಶ್ರೀನಗರದ ಕೌರಿ ಪ್ರದೇಶಕ್ಕೆ ಸಂಪರ್ಕ ಸಾಧಿಸಲಿದೆ. ಸುಮಾರು 1,100 ಕೋಟಿ ರೂಪಾಯಿ ವೆಚ್ಚದಲ್ಲಿ 35 ಮೀಟರ್ ಕಮಾನಿನಾಕಾರದಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ದೇಶದ ಉಳಿದೆಲ್ಲಾ ಭಾಗಗಳಿಗಿಂತಲೂ ಈ ಸೇತುವೆ ಕಾಶ್ಮೀರ ಕಣಿವೆಯನ್ನು ಸಂಪರ್ಕಿಸುತ್ತಿರುವ ಅತ್ಯಂತ ಕಠಿಣ ಮಾರ್ಗವಾಗಿದೆ. ಈ ರೈಲ್ವೆ ಸೇತುವೆ ಕಾಮಗಾರಿ ಪೂರ್ಣಗೊಂಡಲ್ಲಿ ಇದು ಚೀನಾದ ಶುಬೈ ರೈಲ್ವೆ ಸೇತುವೆಯ(275 ಮೀಟರ್) ದಾಖಲೆಯನ್ನು ಮುರಿಯಲಿದೆ.
ಚೆನಾಬ್ ನದಿಯಿಂದ ಸುಮಾರು 1,178 ಅಡಿ (ಐಫೆಲ್ ಟವರ್ ಎತ್ತರ ಅಂದಾಜು 1064 ಅಡಿ) ಎತ್ತರದಲ್ಲಿ ಈ ರೈಲ್ವೆ ಸೇತುವೆ ನಿರ್ಮಾಣವಾಗುತ್ತಿದೆ. ಇದಕ್ಕೆ ತಗಲುವ ವೆಚ್ಚ 1,100 ಕೋಟಿ, ಇದಕ್ಕೆ 24 ಸಾವಿರ ಟನ್ ಸ್ಟೀಲ್ ಉಪಯೋಗಿಸಲಾಗುತ್ತಿದೆ. ಅಷ್ಟೇ ಅಲ್ಲ ಗಾಳಿಯ ಒತ್ತಡವನ್ನು ಅಳೆಯಲು ಅತ್ಯಾಧುನಿಕ ಸೆನ್ಸಾರ್ ಉಪಕರಣ ಕೂಡಾ ಅಳವಡಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.