ತಾತ್ಕಾಲಿಕವಾಗಿ ಸುದ್ದಿಮಾಧ್ಯಮಗಳ ಟಿಆರ್‌ಪಿ ನಿಷೇಧಿಸಿದ BARC; ಆದಾಯಕ್ಕೆ ಹಿನ್ನಡೆ ಸಾಧ್ಯತೆ
Team Udayavani, Oct 15, 2020, 4:51 PM IST
ಮಣಿಪಾಲ: ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಾರ್ಕ್) ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಅನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಇದು ಮುಂದಿನ ಎಂಟು- ಹನ್ನೆರಡು ವಾರಗಳವರೆಗೆ ಇರಬಹುದು ಎಂದು ಹೇಳಲಾಗುತ್ತಿದೆ.
ತಾಂತ್ರಿಕ ಸಮಿತಿಯು ಟಿಆರ್‌ಪಿ ನೀಡುವ ಸಂಪೂರ್ಣ ಪ್ರಕ್ರಿಯೆಯನ್ನು ಪರಿಶೀಲಿಸಲಿದ್ದು, ಕಳ್ಳತನಕ್ಕೆ ಇದ್ದ ಅವಕಾಶಗಳನ್ನು ಸರಿಪಡಿಸಿಕೊಳ್ಳಲಿದೆ. ಕಳೆದ ಗುರುವಾರ ರಿಪಬ್ಲಿಕ್ ಸೇರಿದಂತೆ ಕೆಲವು ಚಾನೆಲ್‌ಗಳು ಹಣ ಪಾವತಿಸುವ ಮೂಲಕ ಟಿಆರ್‌ಪಿಯನ್ನು ಹೆಚ್ಚಿಸಿದ ಪ್ರಕರಣವನ್ನು ಮುಂಬಯಿ ಪೊಲೀಸರು ಬೇಧಿಸಿದ್ದರು.
ಈ ಕುರಿತು ಗುರುವಾರ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಬಾರ್ಕ್, ಚಾಲ್ತಿಯಲ್ಲಿರುವ ಡಾಟಾ ಸಂಗ್ರಹ ವ್ಯವಸ್ಥೆಯನ್ನು ಪರಿಶೀಲಿಸಿ, ಅವುಗಳಲ್ಲಿ ಸುಧಾರಣೆ ಕೈಗೊಂಡು, ಅಂಕಿ-ಅಂಶ ಸಂಗ್ರಹಗೊಳಿಸುವ ಮನೆಗಳಲ್ಲಿ ನಡೆಯುವ ಸಂಭಾವ್ಯ ಹಸ್ತಕ್ಷೇಪವನ್ನು ತಡೆಯುವುದಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಈ ನಿರ್ಧಾರ ಬಹಳ ಮುಖ್ಯ ಎಂದು ಬಾರ್ಕ್ ಇಂಡಿಯಾ ಮಂಡಳಿಯ ಅಧ್ಯಕ್ಷ ಪುನೀತ್ ಗೋಯೆಂಕಾ ಹೇಳಿದ್ದಾರೆ.
BARC India to pause audience estimates (ratings) of news channels
To know more – https://t.co/JVywt62HC2
— BARCIndia (@BARCIndia) October 15, 2020
ಬಾರ್ಕ್ ಎಂದರೇನು?
ಬಾರ್ಕ್ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ಎನ್ನುವುದು ಜಾಹೀರಾತುದಾರರು, ಜಾಹೀರಾತು ಏಜೆನ್ಸಿಗಳು ಮತ್ತು ಪ್ರಸಾರ ಕಂಪನಿಗಳಿಂದ ನಡೆಸಲ್ಪಡುವ ಒಂದು ಉದ್ಯಮ ಸಂಸ್ಥೆಯಾಗಿದೆ. ಇದು ಇಂಡಿಯನ್ ಸೊಸೈಟಿ ಆಫ್ ಅಡ್ವರ್ಟೈಸರ್ಸ್, ಇಂಡಿಯನ್ ಬ್ರಾಡ್ಕಾಸ್ಟಿಂಗ್ ಫೌಂಡೇಶನ್ ಮತ್ತು ಅಡ್ವರ್ಟೈಸಿಂಗ್ ಏಜೆನ್ಸಿ ಅಸೋಸಿಯೇಶನ್ ಆಫ್ ಇಂಡಿಯಾದ ಜಂಟಿ ಮಾಲೀಕ.
BARC ಡೇಟಾವನ್ನು ಹೇಗೆ ಬಳಸಲಾಗುತ್ತದೆ?
ಬಾರ್ಕ್ ಪ್ರತಿ ಗುರುವಾರ ತನ್ನ ಡೇಟಾವನ್ನು ಬಿಡುಗಡೆ ಮಾಡುತ್ತದೆ. ಹಲವು ಆಯಾಮಗಳ ಮೂಲಕ ಇದನ್ನು ಅಧ್ಯಯನ ಮಾಡುವ ಸಂಸ್ಥೆ ಜನರು ಎಷ್ಟು ಸಮಯದ ವರೆಗೆ ಪ್ರದರ್ಶನವನ್ನು ವೀಕ್ಷಿಸುತ್ತಿದ್ದಾರೆ ಎಂಬುದನ್ದುನು ಹೇಳುತ್ತದೆ. ಚಾನಲ್‌ನ ಜಾಹೀರಾತು ಆದಾಯವು ಅದನ್ನು ಅವಲಂಬಿಸಿರುತ್ತದೆ. BARC ಈ ಸಾಧನಗಳನ್ನು ಗೌಪ್ಯವಾಗಿರಿಸುತ್ತದೆ. ಆದರೆ ಇದನ್ನು ನಕಲು ಮಾಡಿದ ಆರೋಪ ರಪಬ್ಲಿಕ್ ಸೇರಿದಂತೆ ಸ್ಥಳೀ ವಾಹಿನಿ ಮೇಲಿದೆ.
ನಕಲು ಮಾಡಿದ್ದು ಹೇಗೆ?
ಟಿವಿ ಚಾನೆಲ್‌ಗಳು ಟಿಆರ್‌ಪಿಯನ್ನು ಎರಡು ರೀತಿಯಲ್ಲಿ ಕದಿಯಬಹುದು. ಮೊದಲನೆಯದಾಗಿ, ಬಾರ್-ಒ-ಮೀಟರ್ ಅಥವಾ ಪೀಪಲ್ ಮೀಟರ್ ಅನ್ನು ಎಲ್ಲಿ ಸ್ಥಾಪಿಸಲಾಗಿದೆ ಎಂದು ಅವರಿಗೆ ತಿಳಿದಿದ್ದರೆ, ಅವರು ಆ ಕುಟುಂಬಗಳಿಗೆ ತಮ್ಮ ಚಾನೆಲ್‌ಗಳನ್ನು ನೇರವಾಗಿ ನಗದು ವೀಕ್ಷಿಸಲು ಪ್ರೋತ್ಸಾಹಿಸುತ್ತಾರೆ. ಎರಡನೆಯದಾಗಿ, ಕೇಬಲ್ ಆಪರೇಟರ್‌ಗಳು ಅಥವಾ ಮಲ್ಟಿ-ಸಿಸ್ಟಮ್ ಆಪರೇಟರ್‌ಗಳ ಮೂಲಕ ತಮ್ಮ ಚಾನೆಲ್‌ಗಳನ್ನು ಮೊದಲು ವೀಕ್ಷಕರು ನೋಡುವಂತೆ ಮಾಡಲಾಗುತ್ತದೆ.
ಈ ತಿಂಗಳ ಆರಂಭದಲ್ಲಿ ಟಿಆರ್‌ಪಿ ಹಗರಣ ಪತ್ತೆ ಹಚ್ಚಿದ ನಗರ ಪೊಲೀಸರು ಕನಿಷ್ಠ ಐದು ಜನರನ್ನು ಬಂಧಿಸಿದ್ದಾರೆ. ಬಂಧನಕ್ಕೊಳಗಾದವರಲ್ಲಿ ನ್ಯೂಸ್ ಚಾನೆಲ್ ನೌಕರರು ಸೇರಿದ್ದಾರೆ. ಅರ್ನಾಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಮೀಡಿಯಾ ಗ್ರೂಪ್‌ನ ಅಧಿಕಾರಿಗಳನ್ನು ಪೊಲೀಸರು ಪ್ರಕರಣಕ್ಕೆ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ರಿಪಬ್ಲಿಕ್ ಮೀಡಿಯಾ ಗ್ರೂಪ್, ಯಾವುದೇ ತಪ್ಪು ಮಾಡಿಲ್ಲ ಎಂದು ಪೊಲೀಸರ ಆರೋಪವನ್ನು ನಿರಾಕರಿಸಿದೆ. ಮುಂಬಯಿ ಪೊಲೀಸರಿಂದ ಬಂದ ಸಮನ್ಸ್ ವಿರುದ್ಧ ರಿಪಬ್ಲಿಕ್ ಟಿವಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಈ ಕುರಿತು ಸುಪ್ರೀಂ ಕೋರ್ಟ್ ಬಾಂಬೆ ಹೈಕೋರ್ಟ್‌ಗೆ ಹೋಗುವಂತೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Kota: ಸಾಸ್ತಾನ ಟೋಲ್: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.