ಏ.1ರಿಂದ ಬಿಎಸ್-6 ಪೆಟ್ರೋಲ್, ಡೀಸೆಲ್ ದರ 1ರೂ. ಏರಿಕೆ?
Team Udayavani, Jan 30, 2020, 9:50 PM IST
ನವದೆಹಲಿ: ಏ.1ರಿಂದ ದೇಶಾದ್ಯಂತ ಭಾರತ್ ಸ್ಟೇಜ್ -6 (ಬಿಎಸ್06) ಪರಿಸರ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಜಾರಿ ಬರಲಿದೆ. ಅದಕ್ಕೆ ಪೂರಕವಾಗಿ ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್ಗೆ 50 ಪೈಸೆಯಿಂದ 1 ರೂ. ವರೆಗೆ ಏರಿಕೆಯಾಗಲಿದೆ.
ಸದ್ಯ ದೇಶದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಿರುವ ಯೂರೋ-4 ಮಾದರಿಯಂತೆ ಬಿಎಸ್-4 ಮಾದರಿಯ ಇಂಧನಗಳನ್ನು ಪೂರೈಸಲಾಗುತ್ತಿದೆ.
ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಏ.1ರಿಂದ ಬಿಎಸ್-6 ನಿಯಮಗಳಿಗೆ ಅನ್ವಯವಾಗುವಂತೆ ಪೆಟ್ರೋಲ್, ಡೀಸೆಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಸದ್ಯ ದೇಶದ ಆಯ್ದ ನಗರಗಳಲ್ಲಿ ಮಾತ್ರ ಬಿಎಸ್-6 ಇಂಧನ ದೊರೆಯುತ್ತಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷ ಸಂಜೀವ್ ಸಿಂಗ್ ಮಾತನಾಡಿ, ಕಂಪನಿಯ ರಿಫೈನರಿಗಳಲ್ಲಿ ಈಗಾಗಲೇ ಬಿಎಸ್-6 ನಿಯಮಗಳಿಗೆ ಅನ್ವಯವಾಗುವಂತೆ ಪೆಟ್ರೋಲ್, ಡೀಸೆಲ್ ಉತ್ಪಾದಿಸಲಾಗುತ್ತದೆ. ಇದರಿಂದಾಗಿ ತೈಲ ಕಂಪನಿಗಳು ರಿಫೈನರಿಗಳ ಮೇಲ್ದರ್ಜೆಗಾಗಿ ಮಾಡಿದ ಹೂಡಿಕೆ ವಾಪಸ್ ಪಡೆವ ನಿಟ್ಟಿನಲ್ಲಿ ದರ ಏರಿಕೆ ಅನಿವಾರ್ಯವಾಗಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.