ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಮತ್ತೆ ಹೊಸ ದಾಖಲೆಯ ಎತ್ತರಕ್ಕೆ
Team Udayavani, Jul 27, 2017, 10:29 AM IST
ಮುಂಬಯಿ : ವಿದೇಶೀ ಬಂಡವಾಳ ನಿರಂತರವಾಗಿ ಹರಿದು ಬರುತ್ತಿರುವುದು, ಸಾಂಸ್ಥಿಕ ತ್ತೈಮಾಸಿಕ ಫಲಿತಾಂಶಗಳು ಆಶಾದಾಯಕವಾಗಿರುವುದು, ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಸ್ಥಿತಿ ನೆಲೆಗೊಂಡಿರುವುದು – ಮುಂತಾದ ಹಲವು ಮುಖ್ಯಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 32,533.34 ಅಂಕಗಳ ಹೊಸ ಸಾರ್ವಕಾಲಿಕ ಮಟ್ಟವನ್ನು ತಲುಪುವ ಸಾಧನೆ ಮಾಡಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲೇ 10,068.40 ಅಂಕಗಳ ಹೊಸ ದಾಖಲೆಯ ಎತ್ತರವನ್ನು ತಲುಪಿದ ಸಾಧನೆ ಮಾಡಿತು.
ಬೆಳಗ್ಗೆ 10.20ರ ಹೊತ್ತಿಗೆ ಸೆನ್ಸೆಕ್ಸ್ 183.66 ಅಂಕಗಳ ಮುನ್ನಡೆಯೊಂದಿಗೆ 32,566.12 ಅಂಕಗಳ ಮಟ್ಟದಲ್ಲೂ, ನಿಫ್ಟಿ 61.40 ಅಂಕಗಳ ಮುನ್ನಡೆಯೊಂದಿಗೆ 10,082.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ಮಾರುತಿ ಸುಜುಕಿ, ಐಸಿಐಸಿಐ ಬ್ಯಾಂಕ್, ಎಚ್ ಸಿ ಎಲ್ ಟೆಕ್ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಎಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ಎಚ್‌ಸಿಎಲ್ ಟೆಕ್, ಈಶರ್ ಮೋಟರ್, ಗೇಲ್ ಶೇರುಗಳು ವಿಜೃಂಭಿಸಿದರು. ಟಾಪ್ ಲೂಸರ್‌ಗಳಾಗಿ ಭಾರ್ತಿ ಏರ್‌ಟೆಲ್, ಸಿಪ್ಲಾ, ಟೆಕ್ ಮಹೀಂದ್ರ, ಸನ್ ಫಾರ್ಮಾ, ಹಿಂಡಾಲ್ಕೋ ಶೇರುಗಳು ನಿರಾಶೆ ಉಂಟುಮಾಡಿದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Borewell Tragedy: ಹತ್ತು ದಿನಗಳ ಕಾರ್ಯಾಚರಣೆ… ಕೊನೆಗೂ ಬದುಕಿ ಉಳಿಯಲಿಲ್ಲ ಚೇತನಾ
Borewell Tragedy: 10 ದಿನದ ಕಾರ್ಯಾಚರಣೆ ಬಳಿಕ ಬದುಕಿ ಬಂದ ಬಾಲೆ, ಇದು ಪವಾಡ ಎಂದ ಪೋಷಕರು
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್ಮರೀನ್ ಸೇರ್ಪಡೆ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
Viral: ಫೇಸ್ಬುಕ್ ಪ್ರೇಯಸಿ ಭೇಟಿಗೆ ಅಕ್ರಮವಾಗಿ ಪಾಕ್ಗೆ ತೆರಳಿ ಸಿಕ್ಕಿಬಿದ್ದ ಭಾರತೀಯ ಯುವಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.