BSE ಮಹಾಪತನ; 1ಸಾವಿರ ಪಾಯಿಂಟ್ಸ್ ಕುಸಿತ: ಹೂಡಿಕೆದಾರರಿಗೆ 8.50 ಲಕ್ಷ ಕೋಟಿ ನಷ್ಟ
Team Udayavani, Jan 24, 2024, 12:41 AM IST
ಮುಂಬಯಿ: ಬಾಂಬೆ ಷೇರು ಪೇಟೆಯಲ್ಲಿ ಮಂಗಳವಾರ ರಕ್ತಪಾತವೇ ಉಂಟಾಗಿದೆ. ಬಾಂಬೆ ಷೇರು ಪೇಟೆಯ ಸೆನ್ಸೆಕ್ಸ್ 1,053 ಪಾಯಿಂಟ್ಸ್ ಪತನ ಗೊಂಡು ಕುಸಿದು 71 ಸಾವಿರಕ್ಕಿಂತ ಕೆಳಗಿಳಿದಿದೆ.
ದಿನದ ಆರಂಭದಲ್ಲಿ 450 ಪಾಯಿಂಟ್ಸ್ ಏರಿಕೆಯಿಂದ ಆರಂಭ ವಾಗಿರುವ ಸೆನ್ಸೆಕ್ಸ್ ಮಧ್ಯಂತರದಲ್ಲಿ 70,234 ಪಾಯಿಂಟ್ಸ್ ವರೆಗೆ ಕುಸಿತ ಕಂಡಿತ್ತು. ದಿನಾಂತ್ಯಕ್ಕೆ ಅದು 1,053 ಪಾಯಿಂಟ್ಸ್ ಕುಸಿದು 72,234ರಲ್ಲಿ ಸೆನ್ಸೆಕ್ಸ್ ಮುಕ್ತಾಯ ಗೊಂಡಿತು. ಈ ಪತನದಿಂದಾಗಿ ಬಾಂಬೆ ಷೇರು ಪೇಟೆಯಲ್ಲಿ ಹೂಡಿಕೆದಾರರಿಗೆ 8.50 ಲಕ್ಷ ಕೋಟಿ ರೂ. ನಷ್ಟವಾಗಿದೆ.
ಎಚ್ಡಿಎಫ್ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಸ್ಬಿಐನ ಷೇರು ಗಳು ಪ್ರಧಾನವಾಗಿ ನಷ್ಟ ಅನುಭವಿ ಸಿದವು. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ, ಹೌತಿ ಬಂಡುಕೋರ ದಾಳಿಯಿಂದಾಗಿ ಜಗತ್ತಿನ ಷೇರು ಪೇಟೆ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾ ಮ ಉಂಟಾಗಿದೆ.
ಬಿಎಸ್ಇನಲ್ಲಿ ಒಟ್ಟು 24 ಕಂಪನಿಗಳ ಷೇರುಗಳು ನಷ್ಟ ಅನುಭವಿಸಿದವು ನಿಫ್ಟಿ ಕೂಡ 330 ಪಾಯಿಂಟ್ಸ್ ಕುಸಿತಗೊಂಡು 21,241 ಪಾಯಿಂಟ್ಸ್ಗೆ ವಹಿವಾಟು ಕೊನೆಗೊಳಿಸಿತು.
ಕುಸಿತಕ್ಕೆ ಕಾರಣಗಳೇನು?
· ಇಸ್ರೇಲ್ -ಹಮಾಸ್ ನಡುವಿನ ಯುದ್ಧ ತೀವ್ರಗೊಂಡಿರುವುದು
· ರಿಲಯನ್ಸ್ ಇಂಡಸ್ಟ್ರೀಸ್ನ ಷೇರುಗಳಿಗೆ ಬೇಡಿಕೆ ಕುಸಿತ
· ಕಾರ್ಪೊರೇಟ್ ಕಂಪನಿಗಳ ತ್ತೈಮಾಸಿಕ ವರದಿಗಳ ಬಗೆಗಿನ ಆತಂಕದ ನಿರೀಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.