ಜಮ್ಮು:ಗಡಿಯಲ್ಲಿ 20 ಮೀಟರ್ ಉದ್ದದ ಸುರಂಗ ಪತ್ತೆ, 3,300 ಕಿ.ಮೀ ಗಡಿಯುದ್ದಕ್ಕೂ BSF ನಿಯೋಜನೆ
ಭದ್ರತಾ ಪಡೆ ಸುರಂಗವನ್ನು ಪರಿಶೀಲಿಸಿದಾಗ ಸುರಂಗದ ದ್ವಾರದಲ್ಲಿ ಪ್ಲ್ಯಾಸ್ಟಿಕ್ ನ ಮರಳು ಚೀಲ ಪತ್ತೆಯಾಗಿತ್ತು.
Team Udayavani, Aug 29, 2020, 4:54 PM IST
Representative Image
ಜಮ್ಮು: ಜಮ್ಮುವಿನ ಭಾರತ – ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಸಮೀಪ ಸುರಂಗ ತೋಡಿರುವುದನ್ನು ಗಡಿ ಭದ್ರತಾ ಪಡೆ (ಬಿಎಸ್ ಎಫ್) ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ಶನಿವಾರ (ಆಗಸ್ಟ್ 29, 2020) ತಿಳಿಸಿದ್ದಾರೆ.
ಈ ಭಾಗದಲ್ಲಿ ಭದ್ರತಾ ಪಡೆ ಭಾರೀ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಇನ್ನೂ ಇಂತಹ ಸುರಂಗ ಮಾರ್ಗಗಳಿವೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಸುರಂಗ ಮಾರ್ಗದ ಮೂಲಕ ಉಗ್ರರು ಒಳನುಸುಳಲು ಹಾಗೂ ಮಾದಕ ದ್ರವ್ಯ, ಶಸ್ತ್ರಾಸ್ತ್ರ ಸಾಗಾಟಕ್ಕೆ ಉಪಯೋಗಿಸುತ್ತಿರುವುದಾಗಿ ವರದಿ ವಿವರಿಸಿದೆ.
ಭಾರತದ ಗಡಿಯಿಂದ ಸುಮಾರು 50 ಮೀಟರ್ ದೂರದವರೆಗೆ ಸುರಂಗ ತೋಡಲಾಗಿದ್ದು, ಇದು ಜಮ್ಮುವಿನ ಸಾಂಬಾ ಸೆಕ್ಟರ್ ನ ಸಮೀಪ ಇದ್ದು ಇಲ್ಲಿ ಬಿಎಸ್ ಎಫ್ ಗಸ್ತು ತಿರುಗುತ್ತಿದೆ ಎಂದು ವರದಿ ಹೇಳಿದೆ.
ಬಳಿಕ ಭದ್ರತಾ ಪಡೆ ಸುರಂಗವನ್ನು ಪರಿಶೀಲಿಸಿದಾಗ ಸುರಂಗದ ದ್ವಾರದಲ್ಲಿ ಪ್ಲ್ಯಾಸ್ಟಿಕ್ ನ ಮರಳು ಚೀಲ ಪತ್ತೆಯಾಗಿತ್ತು. ಇದರಲ್ಲಿ ಪಾಕಿಸ್ತಾನದ ಮಾರ್ಕಿಂಗ್ (ಚಿಹ್ನೆ) ಇದ್ದಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಭಾರೀ ಮಳೆ ಸುರಿದಿದ್ದು, ಕೆಲವು ಭೂ ಭಾಗ ಕುಸಿಯುತ್ತಿರುವುದನ್ನು ಬಿಎಸ್ ಎಫ್ ತಂಡ ಗಮನಿಸಿರುವುದಾಗಿ ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ. ಭೂ ಶೋಧಕ ಯಂತ್ರದ ಮೂಲಕ ಪರಿಶೀಲಿಸಿದಾಗ ಸುರಂಗ ಮಾರ್ಗ ಪತ್ತೆಯಾಗಿತ್ತು. ನಂತರ ಒಳಗಿಳಿದು ಪರಿಶೀಲಿಸಿದಾಗ ಸುಮಾರು 20 ಮೀಟರ್ ಉದ್ದದ ಸುರಂಗ ಪತ್ತೆಯಾಗಿತ್ತು ಎಂದು ವರದಿ ಹೇಳಿದೆ.
ಮೂಲಗಳ ಪ್ರಕಾರ, ಈ ಸುರಂಗ 25 ಅಡಿ ಆಳವಿದ್ದು, ಇದರೊಳಗೆ 8-10 ಮರಳು ಚೀಲ ಸಿಕ್ಕಿದ್ದು, ಇದರಲ್ಲಿ “ಕರಾಚಿ ಮತ್ತು ಶಾಕಾರ್ ಗಢ್” ಎಂದು ಬರೆಯಲಾಗಿದೆ. ಸುರಂಗದಿಂದ 400 ಮೀಟರ್ ದೂರದಲ್ಲಿ ಪಾಕಿಸ್ತಾನಿ ಗಡಿ ಪೋಸ್ಟ್ ಇದ್ದಿರುವುದಾಗಿ ವರದಿ ತಿಳಿಸಿದೆ.
ಇತ್ತೀಚೆಗಷ್ಟೇ ಐವರು ನುಸುಳುಕೋರರನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿತ್ತು. ಜಮ್ಮುವಿನ 3,300 ಕಿಲೋ ಮೀಟರ್ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಬಿಎಸ್ ಎಫ್ ಯೋಧರನ್ನು ನಿಯೋಜಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.