ಇಂಡೋ-ಪಾಕ್ ಗಡಿ ಸಮೀಪ ಬಿಎಸ್ಎಫ್ ಕಾರ್ಯಾಚರಣೆ: ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ
Team Udayavani, Sep 12, 2020, 8:01 PM IST
ಫಿರೋಜ್‌ಪುರ: ಇಂಡೋ-ಪಾಕ್ ಗಡಿಯ ಸಮೀಪವಿರುವ ಪಂಜಾಬ್ ನ ಅಬೋಹಾರ್ ಸೆಕ್ಟರ್‌ನಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶನಿವಾರ ವಶಪಡಿಸಿಕೊಂಡಿದೆ. ಈ ಮೂಲಕ ಕಳ್ಳಸಾಗಾಣಿಕೆ ಮಾಡುತ್ತಿದ್ದ ಯತ್ನವನ್ನು ವಿಫಲಗೊಳಿಸಿದೆ.
ವರದಿಗಳ ಪ್ರಕಾರ, ಬಿಎಸ್‌ಎಫ್‌ನ 124 ನೇ ಬೆಟಾಲಿಯನ್, 3 ಎಕೆ -47 ರೈಫಲ್‌ಗಳು, 91 ಸುತ್ತಿನ 7.62 ಎಂಎಂ ಮದ್ದುಗುಂಡುಗಳು, ನಾಲ್ಕು ಎಂ-16 ರೈಫಲ್, 57 ಸುತ್ತುಗಳ 5.56 ಎಂಎಂ ಮದ್ದುಗುಂಡುಗಳು, ಎರಡು ಮೇಡ್ ಇನ್ ಚೀನಾ ಪಿಸ್ತೂಲ್‌ಗಳು ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.
On 12 Sept’ 2020, alert BSF troops foiled attempt by anti-national elements & recovered 03 AK-47 rifles with 06 magazines & 91 rds, 02 M-16 Rifles with 04 magazines & 57 Rds and 02 Pistols with 04 magazines & 20 rds along Indo-Pak border of Abohar, Distt Ferozepur, Punjab.
(1/n) pic.twitter.com/dYgCh3sM7q— BSF (@BSF_India) September 12, 2020
ಈ ಮೂಲಕ ಬಿಎಸ್ಎಫ್ ಪಡೆ ಭಾರೀ ದುರಂತವೊಂದನ್ನು ತಡೆಗಟ್ಟಿದೆ. ಬಿಎಸ್ಎಫ್ ಪಡೆ ಇದೇ ವರ್ಷಾರಂಭದಿಂದ ಇಲ್ಲಿಯವರೆಗೂ 394.742 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ, ಭಾರತೀಯ ಗಡಿಯನ್ನು ದಾಟಿದ 77 ಜನರನ್ನು ಬಂಧಿಸಿದೆ, ಇದರಲ್ಲಿ 10 ಪಾಕಿಸ್ತಾನದ ಒಳನುಸುಳುಕೋರರಿದ್ದರು. ವಿವಿಧ ರೀತಿಯ ಶಸ್ತ್ರಾಸ್ತ್ರಗಳು, 650 ಸುತ್ತು ಮದ್ದುಗುಂಡುಗಳು, ಆರು ಪಾಕಿಸ್ತಾನ ಮೊಬೈಲ್ ಫೋನ್‌ಗಳು ಮತ್ತು 10 ಪಾಕಿಸ್ತಾನ ಸಿಮ್ ಕಾರ್ಡ್‌ಗಳು ವಶಕ್ಕೆ ತೆಗೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.