ನವವಿವಾಹಿತ ಯೋಧರಿಗೆ ಅತಿಥಿ ಗೃಹದ ವ್ಯವಸ್ಥೆ
Team Udayavani, Apr 9, 2018, 6:30 AM IST
ಹೊಸದಿಲ್ಲಿ: ಕೆಲವು ದಿನಗಳಾದರೂ ರಜೆ ಪಡೆದು ಊರಿಗೆ ಮರಳಿ ಅಪ್ಪ- ಅಮ್ಮನನ್ನು ಕಾಣಬೇಕು ಎಂಬ ತವಕ, ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವವರಿಗೆ ಪತ್ನಿಯ ಸಾಂಗತ್ಯದ ಬಯಕೆ, ಆಸ್ಪತ್ರೆಗೆ ಧಾವಿಸಿ ತನ್ನ ಕರುಳ ಕುಡಿ ಕಣ್ತೆರೆಯುವುದನ್ನು ಒಂದು ಬಾರಿ ನೋಡಿ ಆನಂದಿಸುವ ಆಸೆ… ಈ ಸಂತಸದ ಗಳಿಗೆಯನ್ನು ಸಂಪೂರ್ಣವಾಗಿ ಅನುಭವಿಸುವ ಮುನ್ನವೇ ಕರ್ತವ್ಯದ ಕರೆ ಬಂದರೆ, ಮತ್ತೆ ಗಡಿಯತ್ತ ಪಯಣ…
ಹೌದು, ಸುಮಾರು 30 ವರ್ಷಗಳ ಸೇವಾವಧಿಯಲ್ಲಿ ಯೋಧರು ತಮ್ಮ ಕುಟುಂಬದ ಜತೆಗೆ ಕಳೆಯುವುದು ಕೇವಲ 5 ವರ್ಷ ಮಾತ್ರ. ದೇಶದ ಜನ ನೆಮ್ಮದಿಯಿಂದ ನಿದ್ರಿಸಲೆಂದು ಬಯಸುವ, ನಮಗಾಗಿ ಪ್ರಾಣವನ್ನೇ ಪಣ ಕ್ಕಿಡುವ ಯೋಧರಿಗೂ ಅವರದ್ದೇ ಆದ ಆಸೆಗಳಿರುತ್ತವೆ. ಆದರೆ ದೇಶರಕ್ಷಣೆಯ ಕೆಲಸದಲ್ಲಿ ತೊಡಗಿರುವ ಅವರಿಗೆ ಅದನ್ನು ಪೂರ್ಣಗೊಳಿಸಲು ಆಗುವುದೇ ಇಲ್ಲ. ಹೀಗಾಗಿ ಏಕಾಂಗಿತನ, ಮಾನಸಿಕ ಒತ್ತಡ, ಕಿರಿಕಿರಿ ಅವರ ಜತೆಯಾಗುತ್ತದೆ. ಯೋಧರನ್ನು ಇಂಥ ಋಣಾತ್ಮಕ ಬದುಕಿನಿಂದ ಹೊರತರುವ ನಿಟ್ಟಿನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಹತ್ವದ ಹೆಜ್ಜೆಯಿಟ್ಟಿದೆ. ಅದೇನೆಂದರೆ ದೇಶಾದ್ಯಂತ 190 ಕಡೆ ಅತಿಥಿಗೃಹಗಳನ್ನು ನಿರ್ಮಿಸಿ, ಅಲ್ಲಿ ನವವಿವಾಹಿತ ಯೋಧರಿಗೆ ತಮ್ಮ ಪತ್ನಿಯರೊಂದಿಗೆ ಕಳೆಯುವ, ರಜಾಕಾಲದಲ್ಲಿ ಪತ್ನಿ, ಮಕ್ಕಳೊಂದಿಗೆ ಖುಷಿಯಾಗಿರುವ ಅವಕಾಶ ವನ್ನು ನೀಡುವುದು.
BSF ಮಾಡಿರುವ ಈ ಪ್ರಸ್ತಾವಕ್ಕೆ ಕೇಂದ್ರ ಗೃಹ ಇಲಾಖೆಯೂ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅದರಂತೆ, 186 ಬೆಟಾಲಿಯನ್ ಸಹಿತ 190 ಕಡೆ ಗೆಸ್ಟ್‌ಹೌಸ್ ನಿರ್ಮಾ ಣಕ್ಕೆ ಬಿಎಸ್‌ಎಫ್ ಮುಂದಾಗಿದೆ. ಬಾಂಗ್ಲಾ ಹಾಗೂ ಪಾಕ್ ಗಡಿಯಲ್ಲಿ ಕಾರ್ಯನಿರ್ವಹಿಸುವ ಯೋಧರಿಗೆ ಗಡಿ ಸಮೀಪದ ಪ್ರದೇಶಗಳಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದು ಇಂಥ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ.
ಏನೇನಿರುತ್ತೆ?
ಪ್ರತಿ ಬೆಟಾಲಿಯನ್‌ನಲ್ಲಿ ಸ್ಟುಡಿಯೋ ಅಪಾರ್ಟ್‌ಮೆಂಟ್ ಮಾದರಿ 15 ಅತಿಥಿ ಗೃಹಗಳು ಇರಲಿವೆ. ಪ್ರತಿ ಅತಿಥಿಗೃಹದಲ್ಲಿ ಒಂದು ಬೆಡ್‌ರೂಂ, ಅಡುಗೆ ಮನೆ, ಸ್ನಾನದ ಕೊಠಡಿ ಮತ್ತು ಮನೋರಂಜನೆಗಾಗಿ ಟಿವಿ ವ್ಯವಸ್ಥೆ ಇರಲಿದೆ. ಜತೆಗೆ ಅಡುಗೆ ಮನೆಗೆ ಬೇಕಾದ ಅಗತ್ಯ ವಸ್ತುಗಳು ಇದರಲ್ಲಿರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.