ಫೀಚರ್ ಫೋನ್ಗೆ ಬಿಎಸ್ಸೆನ್ನೆಲ್
Team Udayavani, Sep 19, 2017, 7:05 AM IST
ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರ ಸಂಪರ್ಕ ಸಂಸ್ಥೆ ಬಿಎಸ್ಎನ್ಎಲ್ ಶೀಘ್ರದಲ್ಲೇ ಖಾಸಗಿ ಕಂಪನಿಗಳ ಜತೆಗೂಡಿ ಫೀಚರ್ ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ಮುಂದಿನ ತಿಂಗಳಲ್ಲೇ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ.
ಹೌದು, ಈಗಾಗಲೇ ಸಕಲ ಸಿದ್ಧತೆಯ ಲ್ಲಿರುವ ಬಿಎಸ್ಸೆನ್ನೆಲ್ ದೇಶೀಯ ಮೊಬೈಲ್ ಫೋನ್ ತಯಾರಿಕಾ ಕಂಪನಿಗಳಾದ ಲಾವಾ ಮತ್ತು ಮೈಕ್ರೋಮ್ಯಾಕ್ಸ್ ನೊಂದಿಗೆ ಒಡಂ ಬಡಿಕೆ ಮಾಡಿಕೊಂಡಿದ್ದು, ಹೆಚ್ಚು ಕಡಿಮೆ 2,000 ರೂಪಾಯಿಗೆ ಯಾವುದೇ ಫೀಚರ್ ಫೋನ್ಗೂ ಕಡಿಮೆ ಇಲ್ಲದ ಮಾದರಿ ಹ್ಯಾಂಡ್ಸೆಟ್ಗಳನ್ನು ಪರಿಚಯಿಸಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ಸೆನ್ನೆಲ್ ಅಧ್ಯಕ್ಷ ಅನುಪಮ್ ಶ್ರೀವಾಸ್ತವ್, “”ಗ್ರಾಹಕರಿಗೆ ಉತ್ತಮ ಸೇವೆ ಕಲ್ಪಿಸುವುದೇ ನಮ್ಮ ಮಾರುಕಟ್ಟೆ ತಂತ್ರ. ಇನ್ನೊಂದು ತಿಂಗಳದ ವೇಳೆಗೆ ಮೊಬೈಲ್ ಸೇರಿದಂತೆ ಮೊಬೈಲ್ನ ಉಳಿದ ಪರಿಕರಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಾಗಲಿವೆ. ಇದಕ್ಕಾಗಿಯೇ ಲಾವಾ ಹಾಗೂ ಮೈಕ್ರೋಮ್ಯಾಕ್ಸ್ ಕಂಪನಿ ಗಳೊಂದಿಗೆ ಮಾತುಕತೆ ಮುಗಿಸಿದ್ದೇವೆ” ಎಂದಿದ್ದಾರೆ.
ಇದೇ ವೇಳೆ, ಫೋನ್ಗಳ ಬೆಲೆಗೆ ಸಂಬಂಧಿಸಿ ಮಾತನಾಡಿದ ಅವರು, “”ಬಿಎಸ್ಸೆನ್ನೆಲ್ನ ಕಾರ್ಯ ನಿರ್ವಾಹಕರು ನಮ್ಮೊಂದಿಗೆ ಕೈ ಜೋಡಿಸಿದ ಕಂಪನಿಗಳ ಜತೆ ಮಾತುಕತೆ ನಡೆಸಿ ನಿರ್ಧರಿಸಲಿದ್ದಾರೆ. ಒಂದು ಅಂದಾಜಿನ ಪ್ರಕಾರ 2000 ರೂ. ಆಚೀಚೆ ಇರಲಿದ್ದು, ಅವೆಲ್ಲವೂ ಉಚಿತ ಕರೆ ಸೌಲಭ್ಯವನ್ನೂ ಹೊಂದಿರಲಿವೆ” ಎಂದು ಹೇಳಿದ್ದಾರೆ. ಬಿಎಸ್ಸೆನ್ನೆಲ್ ಗ್ರಾಮೀಣ ಭಾಗವೂ ಸೇರಿ ಅಂದಾಜು 10.5 ಕೋಟಿ ಗ್ರಾಹಕರನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್ಫರ್ಡ್ನಲ್ಲಿ ಭಾರತೀಯರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.