BSP;ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಉತ್ತರಾಧಿಕಾರಿಯನ್ನು ನೇಮಿಸಿದ ಮಾಯಾವತಿ
Team Udayavani, Dec 10, 2023, 2:55 PM IST
ಲಕ್ನೋ:2024ರ ಲೋಕಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಇರುವಾಗ ಮಹತ್ವದ ರಾಜಕೀಯ ವಿದ್ಯಮಾನವೊಂದರಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಅವರು ಭಾನುವಾರ(ಡಿ.10 ರಂದು) ತಮ್ಮ ರಾಜಕೀಯ ಉತ್ತರಾಧಿಕಾರಿಯ ಘೋಷಣೆ ಮಾಡಿದ್ದಾರೆ.
ಮಾಯಾವತಿ ಅವರು, ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಸೋದರಳಿಯ ಆಕಾಶ್ ಆನಂದ್ ಅವರನ್ನು ನೇಮಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೆ ಪಕ್ಷದ ಸಿದ್ಧತೆಗಳನ್ನು ಪರಿಶೀಲಿಸಲು ಮಾಯಾವತಿ ಅವರು ಕರೆದಿದ್ದ ಸಭೆಯಲ್ಲಿ ಈ ನಿರ್ಧಾರದ ಕುರಿತ ಘೋಷಣೆಯನ್ನು ಮಾಡಲಾಗಿದೆ.
“ಆಕಾಶ್ ಆನಂದ್ ಅವರು ಬಿಎಸ್ಪಿಯ ಉಪಸ್ಥಿತಿ ಮತ್ತು ಪಕ್ಷ ದುರ್ಬಲವಾಗಿರುವ ಕಡೆ ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸುತ್ತಾರೆ. ಮಾಯಾವತಿ ಅವರು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಪಕ್ಷವನ್ನು ಮುನ್ನಡೆಸುತ್ತಾರೆ” ಎಂದು ಬಿಎಸ್ಪಿ ನಾಯಕ ಉದಯವೀರ್ ಸಿಂಗ್ ʼಎಎನ್ ಐʼಗೆ ಹೇಳಿದ್ದಾರೆ.
ಯಾರು ಈ ಆಕಾಶ್ ಆನಂದ್?
ಆಕಾಶ್ ಆನಂದ್ ಅವರು ಮಾಯಾವತಿ ಅವರ ಕಿರಿಯ ಸಹೋದರನ ಪುತ್ರ. ಬಿಎಸ್‌ಪಿಯಲ್ಲಿ ಆಕಾಶ್ ಅವರ ಪರಿಚಯ ಹೊಸತಲ್ಲ. 2019 ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಆಕಾಶ್ ಅವರನ್ನು ರಾಷ್ಟ್ರೀಯ ಸಂಯೋಜಕರನ್ನಾಗಿ ಮಾಡಲಾಗಿತ್ತು. ಇದರೊಂದಿಗೆ ಅವರಿಗೆ ಚುನಾವಣ ಉಸ್ತುವಾರಿಯ ಜವಾಬ್ದಾರಿಯನ್ನು ನೀಡಲಾಗಿತ್ತು.
ಇತ್ತೀಚೆಗೆ ನಡೆದ ನಾಲ್ಕು ಚುನಾವಣೆಗಳಿಗೆ ವಿಶೇಷವಾಗಿ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಆಕಾಶ್ ನಿರ್ವಹಿಸಿದ್ದರು. ಆನಂದ್ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಆಳ್ವಾರ್‌ನಲ್ಲಿ 13 ಕಿಮೀ “ಸ್ವಾಭಿಮಾನ್ ಸಂಕಲ್ಪ ಯಾತ್ರೆ” ಯಲ್ಲಿ ಭಾಗವಹಿಸಿದ್ದರು. ಅವರು 2019 ರಲ್ಲಿ ರಾಜಸ್ಥಾನದಲ್ಲಿ ಬಿಎಸ್ಪಿಯ ಚುನಾವಣ ಪ್ರಚಾರದಲ್ಲೂ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.