ಖಾಸಗಿ ಡೈರಿಯಲ್ಲಿ ಬಿ.ಎಸ್.ವೈ. – ಶೋಭಾ ವಿವಾಹದ ಉಲ್ಲೇಖ?
Team Udayavani, Mar 22, 2019, 11:47 AM IST
ನವದೆಹಲಿ: ಆದಾಯ ತೆರಿಗೆ ಇಲಾಖೆಯ ಬಳಿಯಲ್ಲಿ ಇದೆ ಎನ್ನಲಾಗುತ್ತಿರುವ ಯಡಿಯೂರಪ್ಪನವರ ಖಾಸಗಿ ಡೈರಿಯ ಕೆಲವೊಂದು ಪುಟಗಳನ್ನು ಖಾಸಗಿ ಸುದ್ದಿ ವೆಬ್ ಸೈಟ್ ಒಂದು ಬಹಿರಂಗಗೊಳಿಸುತ್ತಿರುವಂತೆ ರಾಜ್ಯ ಮತ್ತು ರಾಷ್ಟ್ರರಾಜಕಾರಣದಲ್ಲಿ ತಲ್ಲಣ ಪ್ರಾರಂಭವಾಗಿದೆ. ಒಂದುಕಡೆ ಈ ಡೈರಿಯಲ್ಲಿ ನಮೂದಾಗಿರುವ 1800 ಕೋಟಿ ರೂಪಾಯಿಗಳ ಕಪ್ಪ ಸಂದಾಯ ಕುರಿತಾಗಿ ಕಾಂಗ್ರೆಸ್ ಗಂಭೀರ ಆರೋಪವನ್ನು ಪತ್ರಿಕಾಗೋಷ್ಠಿಯಲ್ಲಿ ಮಾಡಿದೆ. ಇನ್ನು ಡೈರಿಯ ಒಂದೊಂದು ಪುಟಗಳಲ್ಲಿ ಇದೆ ಎನ್ನಲಾಗುತ್ತಿರುವ ರಹಸ್ಯ ಮಾಹಿತಿಗಳು ಇದೀಗ ಬಹಿರಂಗವಾಗತೊಡಗಿದೆ. ಅದರಲ್ಲಿ ಒಂದು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ನಡುವಿನ ಸಂಬಂಧ ಕುರಿತಾದ ಮಾಹಿತಿ.
ಸ್ವತಃ ಯಡಿಯೂರಪ್ಪನವರೇ ತಮ್ಮ ಖಾಸಗಿ ಡೈರಿಯಲ್ಲಿ ಬರೆದುಕೊಂಡಿರುವಂತೆ, ತಮ್ಮ ಪತ್ನಿ ಮೈತ್ರಾ ದೇವಿ ಅವರು ನಿಧನರಾದ ಬಳಿಕ ತಮ್ಮನ್ನು ಕಾಡುತ್ತಿದ್ದ ಒಂಟಿತನದಿಂದ ಮುಕ್ತಿ ಪಡೆಯಲು ಶೋಭಾ ಕರಂದ್ಲಾಜೆಯವರನ್ನು ಕೇರಳದಲ್ಲಿರುವ ಚೊಟ್ಟಾಣಿಕ್ಕರ ಭಗವತಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾದಂತೆ ವಿವಾಹ ಆಗಿದ್ದಾಗಿ ಈ ಡೈರಿಯಲ್ಲಿ ಬರೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೇ ತಮ್ಮ ಈ ವಿವಾಹಕ್ಕೆ ಯಡೆಯೂರು ಸಿದ್ದಲಿಂಗನೇ ಸಾಕ್ಷಿ ಎಂದೂ ಬರೆದುಕೊಂಡಿದ್ದಾರೆ! ಈ ಡೈರಿಯ ಪುಟಗಳು ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ಕೇಂದ್ರದ ಹಿರಿಯ ನಾಯಕರಿಗೆ ಸಾವಿರಾರು ಕೋಟಿ ರೂಪಾಯಿಗಳ ಕಪ್ಪ ಸಂದಾಯದ ವಿಚಾರ ಮತ್ತು ಬಿ.ಎಸ್.ವೈ. ಹಾಗೂ ಶೋಭಾ ಕರಂದ್ಲಾಜೆ ನಡುವಿನ ವೈವಾಹಿಕ ಸಂಬಂಧದ ವಿಚಾರ ಮುಂಬರುವ ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರ ಹಿಡಿತದ ಮೇಲೆ ಹಾಗೂ ಶೋಭಾ ಕರಂದ್ಲಾಜೆಯವರ ರಾಜಕೀಯ ಭವಿಷ್ಯದ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.