![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Feb 2, 2018, 8:45 AM IST
ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆಯಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಆ ಬೇಸರವನ್ನು ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ದಶಕದ ಬಳಿಕ ಮತ್ತೆ ಪ್ರಾರಂಭಿಸುವ ಮೂಲಕ ಆಂಶಿಕ ಸಂತೋಷ ನೀಡಲು ಪ್ರಯತ್ನ ಮಾಡಲಾಗಿದೆ. ಪ್ರತಿ ತಿಂಗಳು ಸಂಬಳ ಎಣಿಸುವ ಮಂದಿಗೆ ಪ್ರಯಾಣ ಮತ್ತು ವೈದ್ಯಕೀಯ ವೆಚ್ಚಗಳ ಮೇಲೆ 40,000 ರೂ. ತೆರಿಗೆ ವಿನಾಯಿತಿ ಸ್ಟ್ಯಾಂಡರ್ಡ್ ಡಿಡಕ್ಷನ್ ರೂಪದಲ್ಲಿ ಸಿಗಲಿದೆ. 2006-07ನೇ ಸಾಲಿನಿಂದ ಅದು ನಿಂತು ಹೋಗಿತ್ತು. ಈ ಒಂದು ಅಂಶ ಹೊರತುಪಡಿಸಿದರೆ ವೈಯಕ್ತಿಕ ಆದಾಯ ಕರ ಪಾವತಿದಾರರ ತೆರಿಗೆ ಪದ್ಧತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಕಳೆದ ಮೂರು ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿರುವುದರಿಂದ ಈ ಸಲ ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ.
ಹಾಗೆಂದು ಇದು ಭಾರೀ ಸಂಭ್ರಮಿಸುವ ವಿಚಾರವೂ ಅಲ್ಲ. ಪ್ರಸ್ತುತ ಪ್ರಯಾಣ ಮತ್ತು ವೈದ್ಯಕೀಯ ಭತ್ತೆ ಇರುವವರಿಗೆ ಕರ ವಿನಾಯಿತಿ ಸಿಗುತ್ತಿದೆ. ತಿಂಗಳಿಗೆ 1,600 ರೂ.ಯಂತೆ ಪ್ರಯಾಣ ಭತ್ತೆ ಹಾಗೂ ವರ್ಷಕ್ಕೆ 15,000 ರೂ. ವೈದ್ಯಕೀಯ ವೆಚ್ಚವನ್ನು ತೋರಿಸಿ ವಿನಾಯಿತಿ ಪಡೆದುಕೊಳ್ಳಬಹುದಿತ್ತು. ಇದು ಒಟ್ಟು 34,200 ರೂ. ಆಗುತ್ತದೆ. ಜನರಿಗೆ ಹೆಚ್ಚುವರಿ ಲಾಭವಾಗಿರುವುದು 5800 ರೂ. ಮಾತ್ರ. ಆದರೆ ಈಗ ಸ್ಟ್ಯಾಂಡರ್ಡ್ ಡಿಡಕ್ಷನ್ ಮಾಡಿರುವುದರಿಂದ ವೈದ್ಯಕೀಯ ಬಿಲ್‌ಗಳನ್ನೆಲ್ಲ ಸಂಗ್ರಹಿಸಿಟ್ಟುಕೊಂಡು ತೆರಿಗೆ ರಿಟರ್ನ್ಸ್ ಸಲ್ಲಿಸುವ ವೇಳೆ ತೋರಿಸುವ ತಲೆಬಿಸಿ ಇಲ್ಲ. ವೇತನದಾರರೆಲ್ಲ ಈ ವಿನಾಯಿತಿ ಪಡೆದುಕೊಳ್ಳಬಹುದು. ಬಹುತೇಕ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ 2.5 ಕೋಟಿ ವೇತನದಾರರಿಗೆ ಪ್ರಯೋಜನವಾಗುವ ಕೊಡುಗೆಯಿದು. ಇದರಿಂದ ಕೇಂದ್ರ ಸರಕಾರಕ್ಕೆ 8 ಸಾವಿರ ಕೋಟಿ ರೂ. ಆದಾಯ ಕಡಿಮೆಯಾಗಲಿದೆ.
ವೇತನದಾರರಿಂದಲೇ ಹೆಚ್ಚು ತೆರಿಗೆ
2016-17ನೇ ಸಾಲಿನಲ್ಲಿ 1.89 ಕೋಟಿ ವೇತನದಾರರು ಒಟ್ಟು 1.44 ಲಕ್ಷ ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಅಂದರೆ ಸರಾಸರಿಯಾಗಿ ಒಬ್ಬ ವೇತನದಾರ 76,306 ರೂ. ಆದಾಯ ತೆರಿಗೆ ಪಾವತಿಸಿದಂತಾಯಿತು. ಇದೇ ವೇಳೆ ವ್ಯಾಪಾರ ವಹಿವಾಟು ಮಾಡುವ ಉದ್ಯಮಿಗಳು ಪಾವತಿಸಿರುವ ತೆರಿಗೆ ಬರೀ 48,000 ಕೋಟಿ ರೂ.ಒಟ್ಟಾರೆ 1.88 ಕೋಟಿ ಉದ್ಯಮಿಗಳು ಆದಾಯ ತೆರಿಗೆ ಪಾವತಿಸಿದ್ದಾರೆ. ಅಂದರೆ ಪ್ರತಿ ಉದ್ಯಮಿ ಕೇವಲ 25,753 ರೂ. ತೆರಿಗೆ ಪಾವತಿಸಿದಂತಾಯಿತು.
ಹಿರಿಯರಿಗೆ ವಿನಾಯಿತಿ
ಅಂಚೆ ಕಚೇರಿ ಹಾಗೂ ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರ ಠೇವಣಿ ಮೇಲೆ ಸಿಗುವ ಬಡ್ಡಿ ದರಕ್ಕೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 10,000ದಿಂದ 50,000 ರೂ.ವರೆಗೆ ಏರಿಸಲಾಗಿದೆ. ಇವರಿಗೆ ಟಿಡಿಎಸ್ ನಿಯಮಗಳ 194ಎ ಪರಿಚ್ಛೇದದ ಅಡಿಯಲ್ಲಿ ಬರುವ ತೆರಿಗೆಗಳಿಂದ ವಿನಾಯಿತಿ ನೀಡಲಾಗಿದೆ. ಆರೋಗ್ಯ ವಿಮೆಯ ಪ್ರೀಮಿಯಂಗಳ ಮೇಲಿನ 80ಡಿ ಮಾದರಿಯ ತೆರಿಗೆ ಮಿತಿಯನ್ನು 30ರಿಂದ 50 ಸಾವಿರ ರೂ.ವರೆಗೆ ಹೆಚ್ಚಿಸಲಾಗಿದೆ.
ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆಗಾಗಿ ಮಾಡುವ ವೆಚ್ಚದ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯ ಮಿತಿಯನ್ನು 60,000 ರೂ.ದಿಂದ 1 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. ವಿವಿಧ ಯೋಜನೆಯ ಸಿಗುವ ರಿಯಾಯಿತಿಯಿಂದಾಗಿ, ಹಿರಿಯ ನಾಗರಿಕರಿಗೆ ಒಟ್ಟಾರೆ 4 ಸಾವಿರ ಕೋಟಿ ರೂ. ಅನುಕೂಲ.
ಪ್ರಧಾನ ಮಂತ್ರಿ ವಾಸ ವಂದನ ಯೋಜನೆಯನ್ನು 2020ರ ಮಾರ್ಚ್‌ವರೆಗೆ ಮುಂದುವರಿಸಲು ನಿರ್ಧಾರ. ಹಿರಿಯ ನಾಗರಿಕರ ಹೂಡಿಕೆ ಮಿತಿಯನ್ನು ಈಗಿರುವ 7.5 ಲಕ್ಷ ರೂ.ಗಳಿಂದ 15 ಲಕ್ಷ ರೂ.ವರೆಗೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.