ಬುಲಂದ್‌ಶಹರ್ ಹಿಂಸೆಗೆ ಹತ ಇನ್ಸ್‌ಪೆಕ್ಟರ್ ಕಾರಣ ? ಆರೋಪಿ ವಿಡಿಯೋ
Team Udayavani, Dec 7, 2018, 4:56 PM IST
ಲಕ್ನೋ : ಎರಡು ಜೀವಗಳನ್ನುಬಲಿ ಪಡೆದ ಬುಲಂದ್‌ಶಹರ್ ಗೋ ಹತ್ಯೆ ಪ್ರಕರಣದ ಹಿಂಸೆಗೆ, ಉದ್ರಿಕ್ತರಿಂದ ಹತ್ಯೆಗೀಡಾದ ಪೊಲೀಸ್ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರೇ ಕಾರಣವೇ ?
ಹೀಗೆಂದು ಪ್ರಕರಣದ ಓರ್ವ ಮುಖ್ಯ ಆರೋಪಿಯಾಗಿದ್ದು ಪೊಲೀಸರಿಗೆ ಬೇಕಾಗಿರುವ ಬಿಜೆಪಿ ನಾಯಕ ಶಿಖರ್ ಅಗರ್‌ವಾಲ್ ಹೇಳುವುದನ್ನು ಕಾಣಿಸುವ ವಿಡಿಯೋ ಇದೀಗ ಹೊರ ಬಂದಿದೆ.
ಇದಕ್ಕೆ ಮೊದಲು ಇನ್ನೋರ್ವ ಆರೋಪಿ ಯೋಗೇಶ್ ರಾಜ್ “ನಾನು ಅಮಾಯಕ’ ಎಂದು ಹೇಳಿಕೊಳ್ಳುವುದನ್ನು ಕಾಣಿಸುವ ವಿಡಿಯೋ ನಿನ್ನೆ ಕಂಡು ಬಂದಿತ್ತು.
ಪೊಲೀಸರ ಎಫ್ಐಆರ್‌ನಲ್ಲಿ ಹೆಸರಿಸಲ್ಪಟ್ಟಿರುವ ಅಗರ್‌ವಾಲ್, ಬಿಜೆಪಿಯ ಸಿಯಾನಾ ಘಟಕದ ಯೂತ್ ವಿಂಗ್ ಅಧ್ಯಕ್ಷ.
“ಆರೋಪಿತ ಗೋ ಹತ್ಯೆ ಬಗ್ಗೆ ಎಫ್ಐಆರ್ ದಾಖಲಿಸಲು ದನದ ಶವದ ಹಿಡಿದುಕೊಂಡು ಚಿಂಗ್ರಾವತಿ ಪೊಲೀಸ್ ಠಾಣೆಗೆ ಹೋಗುವಾಗ ನನ್ನನ್ನು ಮತ್ತು ಇತರರನ್ನು ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ತಡೆದದ್ದೇ ಹಿಂಸೆ ಸ್ಫೋಟಿಸಲು ಕಾರಣವಾಯಿತು’ ಎಂದು ಅಗರ್‌ವಾಲ್ ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಇನ್ಸ್‌ಪೆಕ್ಟರ್ ಸುಬೋಧ್ ಸಿಂಗ್ ನನ್ನನ್ನು ಮತ್ತು ನನ್ನ ಜತೆಗಿದ್ದವರನ್ನು ಕೊಲ್ಲುವುದಾಗಿ ಬೆದರಿಕೆ ಒಡ್ಡಿದರು. ಆತನೋರ್ವ ಭ್ರಷ್ಟ ಅಧಿಕಾರಿ; ಗೋಹತ್ಯೆಗೆ ಬೆಂಬಲ ನೀಡುವ ಮುಸ್ಲಿಂ ಪಕ್ಷಪಾತಿ’ ಎಂದು ಅಗರ್‌ವಾಲ್ ಹೇಳಿದ್ದಾರೆ. ಇದೇ ಮಾತುಗಳನ್ನು ಅವರು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅವಿನಾಶ್ ಚಂದ್ರ ಮೌರ್ಯ ಅವರಲ್ಲೂ ಅನಂತರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಮೊನ್ನೆ ಬುಧವಾರ ಬೆಳಕಿಗೆ ಬಂದಿದ್ದ ಇನ್ನೊಂದು ವಿಡಿಯೋ ದಲ್ಲಿ ಬುಲಂದ್‌ಶಹರ್ ಹಿಂಸಾ ಪ್ರಕರಣದ ಮುಖ್ಯ ಆರೋಪಿ ಬಜರಂಗ ದಳ ನಾಯಕ ಯೋಗೇಶ್ ರಾಜ್, “ನಾನು ಅಮಾಯಕ’ ಎಂದು ಸಾರಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.