UP: ಎಂಜಲು ಉಗುಳಿ ಗ್ರಾಹಕನಿಗೆ ಫೇಸ್ ಮಸಾಜ್ ಮಾಡಿದ್ದ ಕ್ಷೌರಿಕನ ಸ್ಥಿತಿ ಏನಾಯ್ತು ನೋಡಿ
Team Udayavani, Aug 8, 2024, 1:14 PM IST
ಲಕ್ನೋ: ಸೆಲೂನ್ ಅಂಗಡಿಯೊಂದರಲ್ಲಿ ಫೇಸ್ ಮಸಾಜ್ ಮಾಡುವ ವೇಳೆ ಕ್ಷೌರಿಕನೊಬ್ಬ ಎಂಜಲು ಉಗುಳಿ ಗ್ರಾಹಕನ ಮುಖಕ್ಕೆ ಮಸಾಜ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕ್ಷೌರಿಕನನ್ನು ಪೊಲೀಸರು ಬಂಧಿಸಿದ್ದು ಇದೀಗ ಆತನ ಅಂಗಡಿಯನ್ನು ಜಿಲ್ಲಾಡಳಿತ ನೆಲಸಮ ಮಾಡಿದೆ.
ಇತ್ತೀಚಿಗೆ ಉತ್ತರ ಪ್ರದೇಶದ ಕನೌಜ್ನಲ್ಲಿರುವ ಸೆಲೂನ್ ಅಂಗಡಿಯೊಂದಕ್ಕೆ ಗ್ರಾಹಕನೊಬ್ಬ ಹೋಗಿ ಹೇರ್ ಕಟ್ಟಿಂಗ್ ಮಾಡಲು ಹೋಗಿದ್ದಾನೆ, ಇದಾದ ಬಳಿಕ ಮುಖಕ್ಕೆ ಮಸಾಜ್ ಮಾಡುವಂತೆ ಕ್ಷೌರಿಕನ ಬಳಿ ಹೇಳಿದ್ದಾನೆ ಅದರಂತೆ ಕ್ಷೌರಿಕ ಮಸಾಜ್ ಮಾಡಲು ಆರಂಭಿಸಿದ್ದಾನೆ ಕೆಲ ಹೊತ್ತಿನ ಬಳಿಕ ಕ್ಷೌರಿಕ ತನ್ನ ಕೈಗೆ ಎಂಜಲು ಉಗುಳಿ ಗ್ರಾಹಕನ ಮುಖಕ್ಕೆ ಮಸಾಜ್ ಮಾಡಿದ್ದಾನೆ. ಅಲ್ಲದೆ ತನ್ನ ಕೃತ್ಯವನ್ನು ತನ್ನದೇ ಮೊಬೈಲ್ ನಲ್ಲಿ ಸೆರೆ ಹಿಡಿದ್ದಿದ್ದಾನೆ, ಕೊನೆಗೆ ಗ್ರಾಹಕನಿಗೆ ಕ್ಷೌರಿಕ ವಿಡಿಯೋ ಮಾಡುತ್ತಿರುವುದು ಗೊತ್ತಾಗಿದೆ ಇದಾದ ಬಳಿಕ ಕ್ಷೌರಿಕನ ಮೊಬೈಲ್ ತಪಾಸಣೆ ನಡೆಸಿದ ವೇಳೆ ಆತನ ನಿಜ ಬಣ್ಣ ಬಯಲಿಗೆ ಬಂದಿದೆ.
ಇತ್ತ ತನ್ನ ಬಂಡವಾಳ ಹೊರ ಜಗತ್ತಿಗೆ ಗೊತ್ತಾಗುತ್ತಿದ್ದಂತೆ ಸೆಲೂನ್ ಅಂಗಡಿಯ ಯುವಕ ಯೂಸುಫ್ ಅಲ್ಲಿಂದ ಕಾಲ್ಕಿತ್ತಿದ್ದಾನೆ, ಜೊತೆಗೆ ಗ್ರಾಹಕ ಪೊಲೀಸ್ ಠಾಣೆಯಲ್ಲಿ ಕ್ಷೌರಿಕನ ವಿರುದ್ಧ ದೂರು ನೀಡಿದ್ದಾನೆ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಯೂಸುಫ್ ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅಲ್ಲದೆ ಆತ ನಡೆಸಿದ ಕೃತ್ಯವನ್ನು ಆತನ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲೂ ಪರಿಶೀಲಿಸಿದ್ದಾರೆ. ಯೂಸುಫ್ ಎಸಗಿದ ಕೃತ್ಯ ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಯೂಸುಫ್ ನಡೆಸುತ್ತಿದ್ದ ಸೆಲೂನ್ ಅಂಗಡಿಯನ್ನೇ ನೆಲಸಮ ಮಾಡಿದೆ.
ಕ್ಷೌರಿಕ ಮಾಡಿದ ಕೃತ್ಯದಿಂದ ಜನ ಸೆಲೂನ್ ಗೆ ಹೋಗಿ ಫೇಸ್ ಮಸಾಜ್ ಮಾಡಲು ಹಿಂದೆ ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ.
ये थूँक जेहाद की घटना कन्नौज के तालग्राम की है पुलिस तो अपना काम करेगी ही लेकिन हमें सावधान रहना होगा ये जेहादी किसी के सगे नहीं । @dgpup @adgzonekanpur @kannaujpolice pic.twitter.com/SLf86Net1d
— हिंदू Subrat Pathak (@SubratPathak12) August 7, 2024
kannauj
➡Bulldozer runs on spit massager’s salon
➡Nagar Panchayat and police administration demolished the salon
➡Accused Yusuf was running a salon at an illegal place
➡Talgram Nagar Panchayat administration took action. pic.twitter.com/swoVYbIxCT— The WINN (@TheWINN_TheWINN) August 8, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.