ಗೋವಾದಲ್ಲಿ “ಬಂಪರ್ ಕ್ಯಾಚ್” : ಮೀನುಗಾರಿಕೆ ಪುನರಾರಂಭ
ಮೀನುಗಾರರಿಗೆ ಮತ್ಸ್ಯ ರಾಶಿ ಕಂಡು ಅಚ್ಚರಿ
Team Udayavani, Jul 27, 2022, 5:22 PM IST
ಪಣಜಿ: ಗೋವಾದಲ್ಲಿ ಕಳೆದ ಎರಡು ತಿಂಗಳುಗಳ ಕಾಲ ಬಂದ್ ಇದ್ದ ಪಾರಂಪರಿಕ ಪದ್ಧತಿಯ ಮೀನುಗಾರಿಕೆ ಪುನರಾರಂಭಗೊಂಡಿದ್ದು, ಪಣಜಿ ಸಮೀಪದ ಕರಂಜಾಳಿ ಸಮುದ್ರದಲ್ಲಿ ಮೀನುಗಾರರು ಹಾಕಿದ್ದ ಬಲೆಗೆ ಭಾರಿ ಪ್ರಮಾಣದಲ್ಲಿ ಮೀನುಗಳು ಬಿದ್ದಿದ್ದು ಇದನ್ನು “ಬಂಪರ್ ಕ್ಯಾಚ್” ಎಂದೇ ಬಣ್ಣಿಸಲಾಗುತ್ತಿದೆ.
ಗೋವಾದಲ್ಲಿ ಮಳೆಗಾಲದ ಸಂದರ್ಭದಲ್ಲಿ ಎರಡು ತಿಂಗಳುಗಳ ಕಾಲ ಆಳಸಮುದ್ರ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗುತ್ತದೆ. ಜೂನ್ 1 ರಿಂದ ಜುಲೈ 31 ರ ವರೆಗೆ ಮೀನುಗಾರಿಗೆ ಸರ್ಕಾರ ನಿಷೇಧ ಹೇರುತ್ತದೆ. ವಾರ್ಷಿಕ ಪದ್ಧತಿಯಂತೆಯೇ ಪಾರಂಪರಿಕ ಪದ್ಧತಿಯ ಮೀನುಗಾರಿಗೆ ಜುಲೈ 26 ರಿಂದ ಪುನರಾರಂಭಗೊಂಡಿದೆ. ಯಾಂತ್ರೀಕೃತ ಬೋಟ್ಗಳ ಮೀನುಗಾರಿಕೆ ಅಗಷ್ಟ್ 1 ರಿಂದ ಪುನರಾರಂಭಗೊಳ್ಳಲಿದೆ.
ಜುಲೈ 27 ರಂದು ಕರಂಜಾಳಿಮ್ ಸಮುದ್ರದಲ್ಲಿ ಪಾರಂಪರಿಕ ಪದ್ಧತಿಯ ಮೀನುಗಾರರು ಹಾಕಿದ್ದ ಬಲೆಗೆ ಭಾರಿ ಪ್ರಮಾಣದಲ್ಲಿ ಮೀನುಗಳು ಬಿದ್ದಿದ್ದು ಸ್ವತಃ ಮೀನುಗಾರರೇ ಇದನ್ನು ಕಂಡು ಅಚ್ಚರಿಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.