ಕುರುಡು ಕಾಂಚಾಣ! IT ದಾಳಿ-ಸಿಮೆಂಟ್ ಗೋದಾಮಿನಲ್ಲಿ ಕೋಟಿ, ಕೋಟಿ ಹಣ ಪತ್ತೆ
2019 polls: Bundles of currencies found in sacks in cement godown
Team Udayavani, Apr 1, 2019, 2:33 PM IST
ಚೆನ್ನೈ: ಕರ್ನಾಟಕದಲ್ಲಿ ಐಟಿ ದಾಳಿ ನಡೆದ ಬೆನ್ನಲ್ಲೇ ಇದೀಗ ತಮಿಳುನಾಡಿನ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಭರ್ಜರಿ ಬೇಟೆಯಾಡಿದ್ದಾರೆ. ವೆಲ್ಲೂರು ಗೋಡೌನ್ ವೊಂದರಲ್ಲಿ ಕೋಟಿ, ಕೋಟಿ ನಗದು ದೊರೆತಿದ್ದು, ಪ್ರತಿ ನೋಟಿನ ಬಂಡಲ್ ಮೇಲೆ ವಾರ್ಡ್ ನಂಬರ್ ನಮೂದಿಸಿರುವುದು ಪತ್ತೆಯಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಸಿಮೆಂಟ್ ಗೋಡೌನ್ ನಲ್ಲಿ ಪತ್ತೆಯಾಗಿರುವ 9ಕೋಟಿಗಿಂತಲೂ ಅಧಿಕ ಹಣ ಡಿಎಂಕೆ ಪಕ್ಷದ ಖಜಾಂಚಿ ಎಸ್.ದೊರೈ ಮುರುಗನ್ ಅವರಿಗೆ ಸೇರಿದ್ದರಬಹುದು ಎಂದು ಐಟಿ ಅಧಿಕಾರಿಗಳು ಶಂಕಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಮುರುಗನ್ ಅವರ ನಿವಾಸ, ಕಚೇರಿ ಮೇಲೆ ಐಟಿ ದಾಳಿ ನಡೆದಿತ್ತು.
ಸೋಮವಾರ ಬೆಳಗ್ಗೆ ದೊರೈ ಮುರುಗನ್ ಅವರ ಆಪ್ತ ಶ್ರೀನಿವಾಸನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಪತ್ತೆಯಾಗಿರುವ ಹಣದ ಮೂಲಗಳ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.