ಪೆಟ್ರೋಲ್ ಬದಲು ನೀರು ತುಂಬಿದ ಬಂಕ್‌ಗೆ ಬೀಗ ಜಡಿದರು!
Team Udayavani, Aug 23, 2017, 12:08 PM IST
ಪುಣೆ: ನಗರದ ಪೆಟ್ರೋಲ್ ಪಂಪ್‌ನಲ್ಲಿ ಚಿಪ್ ಹಾಕಿ ಪೆಟ್ರೋಲ್ ಕಳ್ಳತನ ಮಾಡುವ ಪ್ರಕರಣಗಳು ಅಧಿಕ ಗೊಳ್ಳುತ್ತಿರುವ ಸಂದರ್ಭದಲ್ಲೇ ಪ್ರಸ್ತುತ ಪೆಟ್ರೋಲ್ ಬದಲಿಗೆ ನೀರನ್ನು ತುಂಬುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ.
ಪುಣೆಯ – ನಗರ ಹೈವೆಯ ನಡುವೆ ಶಿರೂರ ಪೆಟ್ರೋಲ್ ಪಂಪ್‌ನಲ್ಲಿ ಈ ಘಟನೆ ನಡೆದಿದೆ. ಯುವಕನೋರ್ವ ತನ್ನ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಂಡು ನಗರದ ಕೋರ್ಟ್‌ಗೆ ಹಿಂದಿರುಗಿದಾಗ ಅವನ ವಾಹನ ರಸ್ತೆಯ ಮಧ್ಯ ದಲ್ಲಿಯೇ ನಿಂತಿದೆ. ಆ ಸಂದರ್ಭದಲ್ಲಿ ವಾಹನದ ಪೆಟ್ರೋಲ್ ಟಾಂಕಿಯನ್ನು ಪರೀಕ್ಷಿಸಿದಾಗ ನೀರು ತುಂಬಿದ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಯುವಕ ಶಿರೂರ ತಹಶೀಲ್‌ದಾರರಿಗೆ ದೂರು ನೀಡಿದ್ದು ಅವರು ತತ್‌ಕ್ಷಣ ಪೆಟ್ರೋಲ್ ಪಂಪ್‌ಗೆ ಬೀಗ ಜಡಿದಿದ್ದಾರೆ.
ಹಿಂದೆ ಅನೇಕರು ಈ ಪೆಟ್ರೊಲ್ ಪಂಪ್‌ನ ಬಗ್ಗೆ ದೂರು ನೀಡಿದ್ದು, ಅದಕ್ಕಾಗಿ ಕ್ರಮ ಕ್ಯೆಗೊಳ್ಳಲಾಗಿದೆ ಎಂದು ಶಿರೂರ ತಹಶೀಲ್ದಾರ ರಂಜಿತ್ ಭೋಸ್ಲೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.