ಕೇಂದ್ರದಿಂದ ಹೆಸರುಕಾಳು ಖರೀದಿ: 6,975 ರೂ. ಬೆಲೆ
Team Udayavani, Aug 31, 2018, 6:00 AM IST
ಹೊಸದಿಲ್ಲಿ: ರೈತರನ್ನು ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಬೆಂಬಲ ಬೆಲೆ ಯೋಜನೆ (ಪಿಎಸ್ಎಸ್) ಅಡಿಯಲ್ಲಿ 23,250 ಟನ್ ಹೆಸರು ಕಾಳನ್ನು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2018-19ನೇ ಸಾಲಿನಲ್ಲಿ ಬೆಳೆಯಲಾದ ಹೆಸರು ಕಾಳು ಬೆಳೆಗೆ ಬೆಂಬಲ ಬೆಲೆಯೂ ಸಿಕ್ಕದೇ ಇರುವುದರಿಂದ ರೈತ ಕಂಗಾಲಾಗಿದ್ದಾನೆ. ಆ ಕಾರಣಕ್ಕಾಗಿ ಕ್ವಿಂಟಲ್ಗೆ 6,975 ರೂ. ದರದಲ್ಲಿ ಕೇಂದ್ರ ಖರೀದಿಸಲು ನಿರ್ಧರಿಸಿದೆ. ಕೃಷಿ ಇಲಾಖೆ ಇದಕ್ಕೆ ಒಪ್ಪಿಗೆ ಪಡೆದುಕೊಂಡಿದೆ. 23,250 ಟನ್ ಹೆಸರು ಕಾಳನ್ನು ಕರ್ನಾಟಕದಿಂದ ಖರೀದಿಸುವ ಬಗ್ಗೆ ಅಧಿವೇಶನದಲ್ಲಿ ಅನುಮೋದಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಒಪ್ಪಿಗೆ ಪಡೆದ ದಿನದಿಂದ 90 ದಿನಗಳ ಅವಧಿಯಲ್ಲಿ ರಾಜ್ಯ ಏಜೆನ್ಸಿಗಳೂ ಒಳಗೊಂಡು, ಕೇಂದ್ರದ ನೋಡಲ್ ಏಜೆನ್ಸಿಗಳಾದ ಎಫ್ಸಿಐ, ನಾಫೆಡ್, ಎನ್ಸಿಸಿಎಫ್ ಮತ್ತು ಎಸ್ಎಫ್ಎಸಿ ಸಂಗ್ರಹಿಸಲಿವೆ. ಈ ಎಲ್ಲಾ ಏಜೆನ್ಸಿಗಳೂ ಸರಾಸರಿ ಗುಣಮಟ್ಟದಲ್ಲಿ ರಾಜ್ಯ ಏಜೆನ್ಸಿಗಳಿಂದ ಖರೀದಿಸಿ, 15 ದಿನಗಳಲ್ಲಿ ಗೋದಾಮಿನ ರಸೀದಿಯನ್ನಾಧರಿಸಿ ಹಣ ಪಾವತಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಧಾರ್ ಲಿಂಕ್ ಕಡ್ಡಾಯ
ರೈತರಿಗೆ ಹಣ ಪಾವತಿಸುವ ಸಂದರ್ಭದಲ್ಲಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಎನ್ನುವುದನ್ನು ಕಡ್ಡಾಯವಾಗಿ ನೋಡಲಾಗುವುದು. ಖರೀದಿ ಪ್ರಕ್ರಿಯೆ ಮುಗಿದ ಮೂರು ದಿನದೊಳಗಾಗಿ ರೈತರಿಗೆ ಹಣ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. 2018-19ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗೆ ಇದು ಅನ್ವಯವಾಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.