By Election ; 7 ಕ್ಷೇತ್ರಗಳಿಗೆ ಇಂದು ಉಪಚುನಾವಣೆ
Team Udayavani, Sep 5, 2023, 6:30 AM IST
ಹೊಸದಿಲ್ಲಿ: ದೇಶದ ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ಮಂಗಳ ವಾರ ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್ ನೇತೃತ್ವದ ಐ.ಎನ್.ಡಿ.ಐ.ಎ. ಸ್ಥಾಪನೆಗೊಂಡ ಬಳಿಕ ಮೊದಲ ಚುನಾವಣೆ ಇದಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ನೇರ ಪೈಪೋಟಿ ಇರಲಿದೆ.
ಝಾರ್ಖಂಡ್‌ನ ದುಮ್ರಿ, ಕೇರಳದ ಪುತುಪಲ್ಲಿ, ತ್ರಿಪುರಾದ ಬಾಕ್ಸನಗರ್ ಮತ್ತು ಧಾನ್‌ಪುರ, ಉತ್ತರಖಂಡದ ಬಾಗೇಶ್ವರ, ಉತ್ತರ ಪ್ರದೇಶದ ಘೋಸಿ ಹಾಗೂ ಪಶ್ಚಿಮ ಬಂಗಾಲದ ಧೂಪ್‌ಗುರಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಸೆ.8ರಂದು ಫಲಿತಾಂಶ ಪ್ರಕಟ ವಾಗಲಿದೆ.
ಮಣಿಪುರ ಆಗುವುದನ್ನು ತಪ್ಪಿಸಬೇಕಿದೆ: ಸ್ಟಾಲಿನ್
“ಇಡೀ ಭಾರತವು ಮಣಿಪುರ ಮತ್ತು ಹರಿಯಾಣವಾಗಿ ಬದಲಾಗುವು ದನ್ನು ತಪ್ಪಿಸಬೇಕಾದರೆ ಲೋಕಸಭಾ ಚುನಾಣೆಯಲ್ಲಿ ಐ.ಎನ್.ಡಿ.ಐ.ಎ. ಮೈತ್ರಿಕೂಟ ಜಯಗಳಿಸಬೇಕಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಪ್ರಸಾರ ವಾದ “ಸ್ಪೀಕಿಂಗ್ ಫಾರ್ ಇಂಡಿಯಾ’ ಪಾಡ್‌ಕಾಸ್ಟ್ ಮೊದಲ ಸಂಚಿಕೆಯಲ್ಲಿ ಮಾತನಾಡಿದ ಸ್ಟಾಲಿನ್, “2002ರಲ್ಲಿ ಗುಜರಾತ್‌ನಲ್ಲಿ ಬಿತ್ತಲಾದ ದ್ವೇಷದ ಮುಂದುವರಿದ ಭಾಗವೇ ಮಣಿಪುರದ ಜನಾಂಗೀಯ ಹಿಂಸಾಚಾರ ಮತ್ತು ಹರಿಯಾಣದ ಕೋಮು ಗಲಭೆಯಾಗಿದೆ’ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.