ಉ.ಪ್ರ, ಕೇರಳ, ಛತ್ತೀಸ್ ಗಢ್, ತ್ರಿಪುರದ 4 ಕ್ಷೇತ್ರಗಳಿಗೆ ಇಂದು ಉಪಚುನಾವಣೆ
Team Udayavani, Sep 23, 2019, 8:47 AM IST
Representative image
ಹೊಸದಿಲ್ಲಿ: ದೇಶದ ನಾಲ್ಕು ರಾಜ್ಯಗಳ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ. ಉತ್ತರ ಪ್ರದೇಶ, ಕೇರಳ, ಛತ್ತೀಸ್ ಗಢ್ ಮತ್ತು ತ್ರಿಪುರ ರಾಜ್ಯಗಳ ತಲಾ ಒಂದು ಕ್ಷೇತ್ರಗಳಲ್ಲಿ ಮತದಾನ ಈಗಾಗಲೇ ಆರಂಭವಾಗಿದೆ.
ಉತ್ತರ ಪ್ರದೇಶದ ಹಮಿರ್ಪುರ್, ಕೇರಳದ ಪಾಲ, ಛತ್ತೀಸ್ ಗಢ್ ನ ದಂತೆವಾಡ ಮತ್ತು ತ್ರಿಪುರ ರಾಜ್ಯದ ಬಧಾರ್ ಘಾಟ್ ನಲ್ಲಿ ವಿಧಾನಸಭಾ ಉಪಚುನಾವಣೆ ನಡೆಯುತ್ತಿದೆ.
ಈ ಉಪಚುನಾವಣೆಯ ಮತ ಎಣಿಕೆ ಸಪ್ಟೆಂಬರ್ 27ರಂದು ನಡೆಯಲಿದೆ.
ಚುನಾವಣಾ ಆಯೋಗ ಮತದಾನಕ್ಕಾಗಿ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಬಳಸುತ್ತಿದೆ.
ಕೇರಳದ ಪಾಲ ಕ್ಷೇತ್ರವನ್ನು 1967ರಿಂದ ಪ್ರತಿನಿಧಿಸುತ್ತಿದ್ದ ಕೇರಳ ಕಾಂಗ್ರೆಸ್ – ಮಣಿ ಪಕ್ಷದ ಸ್ಥಾಪಕ ಕೆ ಎಂ ಮಣಿ ಕಳೆದ ಎಪ್ರಿಲ್ ನಲ್ಲಿ ನಿಧನ ಹೊಂದಿದ ಕಾರಣ ಇಲ್ಲಿ ಸ್ಥಾನ ತೆರವಾಗಿತ್ತು.
ಛತ್ತೀಸ್ ಗಢ್ ನ ದಂತೇವಾಡ ನಕ್ಸಲ್ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದ ಕ್ಷೇತ್ರ. ಇಲ್ಲಿನ ಬಿಜೆಪಿ ನಾಯಕ ಭೀಮ ಮಾಂದೇವಿ ಎಪ್ರಿಲ್ 9ರಂದು ನಕ್ಸಲ್ ದಾಳಿಗೆ ಬಲಿಯಾದ ಕಾರಣ ಚುನಾವಣೆ ನಡೆದಿರಲಿಲ್ಲ. ಈ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿಯೂ ಮೃತರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
MUST WATCH
ಹೊಸ ಸೇರ್ಪಡೆ
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.