ಐಟಿಬಿಪಿಗೆ ಹೆಚ್ಚಿನ ಸಿಬಂದಿ: ಕೇಂದ್ರ ಸಂಪುಟ ನಿರ್ಣಯ
Team Udayavani, Oct 24, 2019, 12:03 AM IST
ಹೊಸದಿಲ್ಲಿ: ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಗೆ
(ಐಟಿಬಿಪಿ) ಹೆಚ್ಚಿನ ಸಿಬಂದಿ ನಿಯೋ ಜನೆ, ಚೀನಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ಅವರನ್ನು ನಿಯೋಜನೆ ಮಾಡುವ ಉದ್ದೇಶದಿಂದ 2 ಹೊಸ ಘಟಕ ಸ್ಥಾಪನೆಗಳ ನಿಟ್ಟಿನಲ್ಲಿ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಸಂಪುಟ ಸಭೆಯ ಬಳಿಕ ಮಾತನಾಡಿದ ಕೇಂದ್ರ ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್ 2001ರ ಬಳಿಕ ಇದೇ ಮೊದಲ ಬಾರಿಗೆ ಸಿಬಂದಿ ಪರಿಷ್ಕರಣೆ ಮಾಡುವ ಚಿಂತನೆ ನಡೆಸಲಾಗಿದೆ ಎಂದಿದ್ದಾರೆ. ಗ್ರೂಪ್ ಎ ಸಾಮಾನ್ಯ ಕರ್ತವ್ಯ ವಿಭಾಗದಲ್ಲಿ ಸಿಬಂದಿ ಸಂಖ್ಯೆ ಹೆಚ್ಚು ಮಾಡುವ ನಿರ್ಧಾರದಿಂದಾಗಿ 3 ಸಾವಿರ ಹೊಸ ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ.
ಚೀನಕ್ಕೆ ಹೊಂದಿಕೊಂಡು ಇರುವ 3, 488 ಕಿಮೀ ದೂರದ ಗಡಿ ಪ್ರದೇಶದಲ್ಲಿ ಕಾವಲು ಮತ್ತು ಭದ್ರತೆ ನೀಡುವ ನಿಟ್ಟಿನಲ್ಲಿ 2 ಹೆಚ್ಚುವರಿ ಘಟಕಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಚಂಡೀಗಢ ಮತ್ತು ಗುವಾಹಟಿಯಲ್ಲಿ ಅವುಗಳ ಕೇಂದ್ರ ಕಚೇರಿ ಇರಲಿದೆ. ಒಂದೂವರೆ ವರ್ಷಗಳಿಂದ ಈ ಪ್ರಸ್ತಾವ ಅನುಮೋದನೆಗಾಗಿ ಕೇಂದ್ರ ಸಂಪುಟದ ಮುಂದೆ ಇತ್ತು.
ಗೃಹ ಉಸ್ತುವಾರಿ ಬೇಡ: ಅಸ್ಸಾಂ ರೈಫಲ್ಸ್ ಅತೃಪ್ತಿ
185 ವರ್ಷಗಳಷ್ಟು ಇತಿಹಾಸ ಹೊಂದಿರುವ ಅರೆಸೇನಾ ಪಡೆಯಾದ ಅಸ್ಸಾಂ ರೈಫಲ್ಸ್ ಅನ್ನು ಕೇಂದ್ರ ಗೃಹ ಇಲಾಖೆಯ ಸುಪರ್ದಿಗೆ ತರಲು ನಡೆಸಲಾಗುತ್ತಿರುವ ಪ್ರಯತ್ನಗಳ ಬಗ್ಗೆ ಆ ಪಡೆಯ ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಸ್ಸಾಂ ರೈಫಲ್ಸ್, ಈಗಿರುವಂತೆ ಭಾರತೀಯ ಸೇನೆಯ ಅಧೀನದಲ್ಲೇ ಮುಂದುವರಿಯಬೇಕು. ಹಾಗೊಂದು ವೇಳೆ ಈ ಪಡೆಯನ್ನು ಗೃಹ ಇಲಾಖೆಯ ವ್ಯಾಪ್ತಿಗೆ ತಂದರೆ, ಭಾರತ-ಚೀನ ಗಡಿಯಲ್ಲಿ ಆ ಪಡೆ ನಿರ್ವಹಿಸುತ್ತಿರುವ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ವಿಚಾರವನ್ನು ಮುಂದಿನವಾರ ಗೃಹ ಇಲಾಖೆಗೆ ಮನವಿ ಮಾಡಿಕೊಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.