ಕೃಷಿ ಸೊಸೈಟಿಗಳಿಗೆ ಡಿಜಿಟಲ್ ಸ್ಪರ್ಶ: ಕಂಪ್ಯೂಟರೀಕರಣಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
Team Udayavani, Jun 30, 2022, 6:40 AM IST
ಹೊಸದಿಲ್ಲಿ: ದೇಶದ ಸಹಕಾರಿ ವಲಯದ ಅತೀ ಸಣ್ಣ ಘಟಕಗಳಾದ ಪ್ರಾಥಮಿಕ ಕೃಷಿ ವಿತರಣ ಸೊಸೈಟಿಗಳನ್ನು (ಪಿಎಸಿಎಸ್) ಗಣಕೀಕೃತ ಮಾಡುವ ಮಹತ್ವದ ಪ್ರಸ್ತಾವನೆಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ.
63 ಸಾವಿರ ಪಿಎಸಿಎಸ್‌ಗಳನ್ನು 2,516 ಕೋ. ರೂ. ವೆಚ್ಚದಲ್ಲಿ ಕಂಪ್ಯೂಟರೀಕರಣಗೊಳಿಸಲಾಗುತ್ತದೆ. ಕೇಂದ್ರ 1,528 ಕೋ. ರೂ. ನೀಡಲಿದೆ.
ಇದರಿಂದ ಈ ಸೊಸೈಟಿಗಳ ವ್ಯವಹಾರಗಳಲ್ಲಿ ಪಾರದರ್ಶಕತೆ ಹೆಚ್ಚಾಗಿ ಎಲ್ಲ ವ್ಯವಹಾರಗಳೂ ತ್ವರಿತವಾಗಿ ನಡೆಯಲಿದೆ. ದೇಶದ 13 ಕೋಟಿ ಸಣ್ಣ ಹಾಗೂ ಮಧ್ಯಮ ರೈತರಿಗೆ ಅನುಕೂಲವಾಗಲಿದೆ.
ದತ್ತಾಂಶ ಸಂರಕ್ಷಣೆಗೆ ಕ್ರಮ: ಗಣಕೀಕರಣ ವೇಳೆಯಲ್ಲಿ ಎಲ್ಲ ಪಿಎಸಿಎಸ್‌ಗಳಿಗೂ ಹಾರ್ಡ್‌ವೇರ್ ನೆರವು ನೀಡಲಾಗುತ್ತದೆ ಹಾಗೂ ಸೊಸೈಟಿಗಳ ವತಿ ಯಿಂದ ಈವರೆಗೆ ನಿರ್ವಹಿಸಲಾಗಿರುವ ಎಲ್ಲ ಲಿಖಿತ ರೂಪದ ವ್ಯವಹಾರ ಗಳನ್ನು ಡಿಜಿಟಲೀಕರಣ ಗೊಳಿಸಲಾಗುತ್ತದೆ. ಇದೊಂದು ಕ್ಲೌಡ್ಆಧಾರಿತ ಸಾಫ್ಟ್‌ವೇರ್.
ಸ್ಥಳೀಯ ಭಾಷೆಯಲ್ಲೇ ವ್ಯವಹಾರ: ಗಣಕೀಕೃತ ಕಾರ್ಯ ಪೂರ್ಣಗೊಂಡ ಬಳಿಕ ಎಲ್ಲ ರಾಜ್ಯಗಳಲ್ಲಿರುವ ಪಿಎಸಿಎಸ್ಗಳೂ ಸ್ಥಳೀಯ ಭಾಷೆಯಲ್ಲಿಯೇ ವ್ಯವಹಾರ ನಡೆಸಲು ಅನುಕೂಲವಾಗುವಂಥ ಸಾಫ್ಟ್‌ವೇರ್ ಅಳವಡಿಸಲಾಗುತ್ತದೆ. ಈ ಸಾಫ್ಟ್‌ವೇರ್ ನಡಿಯಲ್ಲಿ ನಿರ್ವಹಿಸಲಾಗುವ ವ್ಯವಹಾರಗಳು ಸೋರಿಕೆಯಾಗದಂತೆ ತಡೆಯಲು ಕ್ಲೌಡ್ ತಂತ್ರಜ್ಞಾನ ಆಧಾರಿತ ಸಂಗ್ರಹಣ ವ್ಯವಸ್ಥೆ ಹಾಗೂ ಸೈಬರ್ ಭದ್ರತೆ ಹಾಗೂ ದತ್ತಾಂಶ ಸಂರಕ್ಷಣ ವಿಧಾನಗಳನ್ನು ಅಳವಡಿಸಲಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ಸೂಚಿಸಲಾಗಿದೆ.
ನೋಡಲ್ ಕೇಂದ್ರವಾಗಿ ಪರಿವರ್ತನೆ: ಪ್ರತಿಯೊಂದು ಪಿಎಸಿಎಸ್ ಕೇಂದ್ರವನ್ನು ನೋಡಲ್ ಕೇಂದ್ರವನ್ನಾಗಿ ಪರಿವರ್ತಿಸಿ, ಅವುಗಳ ಮೂಲಕ ಖಾತೆಗಳಿಗೆ ನೇರ ಹಣ ವರ್ಗಾವಣೆ (ಡಿಬಿಟಿ), ಬಡ್ಡಿ ಸಹಾಯ ಧನ ಯೋಜನೆ (ಐಎಸ್‌ಎಸ್), ಬೆಳೆ ವಿಮಾ ಯೋಜನೆ (ಪಿಎಂಎಫ್ಬಿವೈ) ಹಾಗೂ ರಸಗೊಬ್ಬರ, ಬೀಜ ವಿತರಣೆ ವ್ಯವಹಾರಗಳ ಕೇಂದ್ರವನ್ನಾಗಿಯೂ ಪರಿವರ್ತಿಸಲು ನಿರ್ಧರಿಸಲಾಗಿದೆ.
ಸಹಕಾರಿ ವಲಯದ ಅಭಿವೃದ್ಧಿಗೆ ಪ್ರಧಾನಿಯವರ ಬದ್ಧತೆ ಮೆಚ್ಚುವಂಥದ್ದು. ಈ ಕ್ಷೇತ್ರದ ಬಲವರ್ಧನೆಗಾಗಿ ಅವರು ಪ್ರತ್ಯೇಕ ಇಲಾಖೆಯನ್ನು ಆರಂಭಿಸಿ, ಅನಂತರದಲ್ಲಿ ಅನೇಕ ಗುರುತರ ನಿರ್ಧಾರಗಳನ್ನು ಈ ಕ್ಷೇತ್ರದ ಅಭಿವೃದ್ಧಿಗಾಗಿ ಮೋದಿಯವರು ಕೈಗೊಂಡಿದ್ದಾರೆ. ಆ ಮೂಲಕ ಸಹಕಾರದಿಂದ ಸಮೃದ್ಧಿ ಎಂಬ ತಮ್ಮ ಘೋಷವಾಕ್ಯ ಕೇವಲ ಘೋಷಣೆಗಾಗಿ ಸೀಮಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
-ಅಮಿತ್ ಶಾ, ಕೇಂದ್ರ ಸಹಕಾರಿ ಹಾಗೂ ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Isro: ಡಿ.20ಕ್ಕೆ ಸ್ಪೇಡೆಕ್ಸ್ ಲಾಂಚ್‌ಗೆ ಸಿದ್ಧತೆ: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.