ಗ್ರಾಹಕರ ಮೇಲಿನ ನಿರ್ಬಂಧ ಸದ್ಯದಲ್ಲೇ ತೆರವು
ಯೆಸ್ ಬ್ಯಾಂಕ್ ಗ್ರಾಹಕರಿಗೆ ಕೇಂದ್ರ ವಿತ್ತ ಸಚಿವರ ಭರವಸೆ
Team Udayavani, Mar 13, 2020, 8:50 PM IST
ನವದೆಹಲಿ: ಯೆಸ್ ಬ್ಯಾಂಕ್ ಗ್ರಾಹಕರ ಮೇಲೆ ವಿಧಿಸಲಾಗಿದ್ದ ಹಣ ಹಿಂಪಡೆಯುವ ಮೇಲಿನ ಮಿತಿ ಹಾಗೂ ಇನ್ನಿತರ ಆರ್ಥಿಕ ವ್ಯವಹಾರಗಳ ನಿರ್ಬಂಧವನ್ನು ಬಹುಶಃ ಇನ್ನು 3 ದಿನಗಳಲ್ಲಿ ಹಿಂಪಡೆಯುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಎಸ್‌ಬಿಐ ನೇತೃತ್ವದಲ್ಲಿ ಯೆಸ್‌ಬ್ಯಾಂಕ್ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ನಷ್ಟದಲ್ಲಿರುವ ಬ್ಯಾಂಕಿನ ಸಮಸ್ಯೆ ಬೇಗನೇ ದೂರವಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಪುನಶ್ಚೇತನಗೊಳ್ಳಲಿರುವ ಯೆಸ್ ಬ್ಯಾಂಕ್‌ಗೆ ಹೊಸ ಆಡಳಿತ ಮಂಡಳಿ ನೇಮಿಸುವುದಾಗಿ ಹೇಳಿದ್ದಾರೆ.
ಈ ನಡುವೆ, ಯೆಸ್ ಬ್ಯಾಂಕ್‌ನ ಷೇರುಗಳನ್ನು ಖರೀದಿಸಲು ಮುಂದಾಗಿರುವ ಐಸಿಐಸಿಐ, ಈ ಖರೀದಿಗಾಗಿ 1,000 ಕೋಟಿ ರೂ. ವ್ಯಯಿಸುವುದಾಗಿ ಹೇಳಿದೆ. ಎಚ್‌ಡಿಎಫ್ಸಿ ಬ್ಯಾಂಕ್ 1,000 ಕೋಟಿ ರೂ., ಆ್ಯಕ್ಸಿಸ್ ಬ್ಯಾಂಕ್ 600 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಮೂರೂ ಬ್ಯಾಂಕುಗಳು ಒಟ್ಟಾರೆಯಾಗಿ 60 ಕೋಟಿ ಷೇರುಗಳನ್ನು ಖರೀದಿಸಲಿವೆ.
ಸಿಬಿಐನಿಂದ ಹೊಸ ಪ್ರಕರಣ
ಯೆಸ್ ಬ್ಯಾಂಕ್‌ನ ಸಂಸ್ಥಾಪಕ ರಾಣಾ ಕಪೂರ್, ಅವರ ಪತ್ನಿ ಬಿಂದು ಹಾಗೂ ಆವಂತಾ ರಿಯಾಲ್ಟಿ ಸಂಸ್ಥೆಯ ಪ್ರವರ್ತಕರಾದ ಗೌತಮ್ ಥಾಪರ್ ವಿರುದ್ಧ ಸಿಬಿಐ ಹೊಸದಾಗಿ ಪ್ರಕರಣವೊಂದನ್ನು ದಾಖಲಿಸಿಕೊಂಡಿದೆ. ಅಮೃತಾ ಶೆರ್ಗಿಲ್ ಬಂಗಲೆಯ ಮಾರಾಟ ಪ್ರಕ್ರಿಯೆಯಲ್ಲಿ ಸುಮಾರು 2,000 ಕೋಟಿ ರೂ.ಗಳ ಸಾಲವನ್ನು ಥಾಪರ್‌ರವರ ಕಂಪನಿಗೆ ನೀಡಲು ಲಂಚ ಪಡೆದ ಆರೋಪವುಳ್ಳ ಪ್ರಕರಣ ಇದಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.