ಗೋಮಾಂಸ ಬಳಕೆ ವದಂತಿ: ಕ್ಯಾಡ್ಬರಿ ವಿರುದ್ಧ ಶುರುವಾಯಿತು ಬಾಯ್ಕಾಟ್ ಟ್ರೆಂಡ್
Team Udayavani, Oct 31, 2022, 11:53 AM IST
ನವದೆಹಲಿ: ಇಷ್ಟು ದಿನ ಸೆಲೆಬ್ರಿಟಿಗಳ ಸಿನಿಮಾಕ್ಕಿದ್ದ ಬಾಯ್ಕಾಟ್ ಟ್ರೆಂಡ್ ಈಗ ಚಾಕ್ಲೇಟ್ ಗೂ ಬಂದಿದೆ. ಟ್ವಿಟರ್ ನಲ್ಲಿ #BoycottCadbury ಟ್ರೆಂಡ್ ಜೋರಾಗಿದೆ.
ಇತ್ತೀಚೆಗೆ ಕ್ಯಾಡ್ಬರಿ ಕಂಪೆನಿ ದೀಪಾವಳಿ ಜಾಹೀರಾತನ್ನು ಮಾಡಿತ್ತು. ಇದರಲ್ಲಿ ಬಡವನೊಬ್ಬ ದೀಪವನ್ನು ಮಾರುವ ದೃಶ್ಯವಿತ್ತು. ದೀಪವನ್ನು ಮಾರುವ ವ್ಯಕ್ತಿಯ ಹೆಸರು ದಾಮೋದರ್ ಆಗಿತ್ತು. ಇದನ್ನೇ ಇಟ್ಟುಕೊಂಡು ವಿಹೆಚ್ ಪಿ ನಾಯಕಿ ಸಾಧ್ವಿ ಪ್ರಾಚಿ ಮೋದಿ ಅವರ ತಂದೆಯ ಹೆಸರು ದಾಮೋದರ್. ಈ ಜಾಹೀರಾತಿನಲ್ಲಿ ಅವರನ್ನು ಲೇವಡಿ ಮಾಡಿ ತೋರಿಸುವುದಕ್ಕೆ ಈ ರೀತಿಯಾಗಿ ತೋರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಜಾಹೀರಾತನ್ನು ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ #BoycottCadbury ಟ್ರೆಂಡ್ ಶುರುವಾಗಿದೆ.
ಬಾಯ್ಕಾಟ್ ಟ್ರೆಂಡ್ ಶುರು ಮಾಡಿದವರಲ್ಲಿ ಕೆಲವರು ಆಸ್ಟ್ರೇಲಿಯಾ ಕ್ಯಾಡ್ಬರಿ ವೈಬ್ ಸೈಟ್ ನ ಸ್ಕ್ರೀನ್ ಶಾಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕ್ಯಾಡ್ಬರಿ ಉತ್ಪನ್ನಗಳಲ್ಲಿ ಜೆಲಾಟಿನ್ ಇದ್ದರೆ ಅದು ಹಲಾಲ್ ಪ್ರಮಾಣೀಕೃತ ಮತ್ತು ಅದನ್ನು ಗೋಮಾಂಸದಿಂದ ಪಡೆಯಲಾಗಿದೆ ಎಂದು ಬರೆದಿದೆ. ಇದು ಬಾಯ್ಕಾಟ್ ಕೂಗಿಗೆ ಧ್ವನಿಯಾದವರಿಗೆ ಮತ್ತಷ್ಟು ಆಕ್ರೋಶಗೊಳ್ಳುವಂತೆ ಮಾಡಿದೆ.
2021 ರಲ್ಲಿ ಕ್ಯಾಡ್ಬರಿ ನಾನ್ ವೆಜ್ ಎಂದು ಇದೇ ರೀತಿಯ ಬಾಯ್ಕಾಟ್ ಟ್ರೆಂಡ್ ಶುರು ಮಾಡಲಾಗಿತ್ತು. ಆಗ ಕಂಪೆನಿ ಭಾರತೀಯ ಕ್ಯಾಡ್ ಬರಿ ಉತ್ಪನ್ನ 100 % ಸಸ್ಯಹಾರಿ ಎಂದು ಕಂಪೆನಿ ಸ್ಪಷ್ಟನೆ ಕೊಟ್ಟಿತ್ತು.
Have you carefully observed Cadbury chocolate’s advertisement on TV channels?
The shopless poor lamp seller is Damodar.
This is done to show someone with PM Narendra Modi’s father’s name in poor light. Chaiwale ka baap diyewala.
Shame on cadbury Company #BoycottCadbury pic.twitter.com/QvzbmOMcX2
— Dr. Prachi Sadhvi (@Sadhvi_prachi) October 30, 2022
This pic is circulating round the tweeter,for au(now)
But,@DairyMilkIn is this done same here in India by providing beef (that’s halal certified) to vegetarians? pic.twitter.com/R5lDbKOKRV— $ ?? (@ShubhNeitri) July 18, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.