ರಫೇಲ್ ಆಡಿಟ್ನಿಂದ ಸಿಎಜಿ ಹಿಂದೆ ಸರಿಯಲಿ: ಕಾಂಗ್ರೆಸ್
Team Udayavani, Feb 11, 2019, 12:30 AM IST
ಹೊಸದಿಲ್ಲಿ: ರಫೇಲ್ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್ ರವಿವಾರ ಹೊಸ ಆಗ್ರಹವನ್ನು ಮುಂದಿಟ್ಟಿದ್ದು, ರಫೇಲ್ ಒಪ್ಪಂದದ ಆಡಿಟಿಂಗ್ನಿಂದ ಮಹಾಲೇಖಪಾಲ (ಸಿಎಜಿ) ರಾಜೀವ್ ಮೆಹ್ರಿಷಿ ಅವರು ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದೆ.
ರಾಜೀವ್ ಅವರು ಒಪ್ಪಂದದ ಸಮಯದಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದು, ಒಪ್ಪಂದ ಕುರಿತ ಮಾತುಕತೆಯಲ್ಲೂ ಭಾಗಿಯಾಗಿದ್ದರು. ಈಗ ಅವರೇ ಆಡಿಟಿಂಗ್ ಮಾಡಿದರೆ, ಸ್ವಹಿತಾಸಕ್ತಿ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ, 36 ರಫೇಲ್ ಜೆಟ್ಗಳನ್ನು ಖರೀದಿಸುವ ಒಪ್ಪಂದದ ಬಗೆಗಿನ ಆಡಿಟಿಂಗ್ನಿಂದ ಅವರು ಹಿಂದೆ ಸರಿಯಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಅಲ್ಲದೆ, ಮೆಹ್ರಿಷಿ ಅವರು ಸಂಸತ್ನಲ್ಲಿ ಸಿಎಜಿ ವರದಿಯನ್ನು ಸಲ್ಲಿಸುವುದೂ ಸರಿಯಲ್ಲ ಎಂದಿದೆ.
ವಿವಾದಿತ ಡೀಲ್ ಕುರಿತ ಸಿಎಜಿ ವರದಿ ಸೋಮವಾರ ಸಂಸತ್ನಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ. ಮೆಹ್ರಿಷಿ ಅವರು 2014ರ ಅ.24ರಿಂದ 2015ರ ಆಗಸ್ಟ್ 30ರ ವರೆಗೆ ಕೇಂದ್ರ ವಿತ್ತ ಕಾರ್ಯದರ್ಶಿಯಾಗಿದ್ದರು. ಪ್ರಧಾನಿ ಮೋದಿ ಅವರು 2015ರ ಎ. 10ರಂದು ಪ್ಯಾರಿಸ್ಗೆ ಹೋಗಿ, ರಫೇಲ್ ಡೀಲ್ಗೆ ಸಹಿ ಹಾಕಿದ್ದರು. ರಕ್ಷಣಾ ಒಪ್ಪಂದದ ಮಾತುಕತೆಯಲ್ಲಿ ವಿತ್ತ ಕಾರ್ಯದರ್ಶಿಯ ಪಾತ್ರವೂ ಪ್ರಮುಖವಾಗಿರುತ್ತದೆ. ಈಗ ರಫೇಲ್ ಡೀಲ್ನಲ್ಲಿ ಭ್ರಷ್ಟಾಚಾರ ಆಗಿರುವ ಕಾರಣ, ಸಿಎಜಿ ಮೆಹ್ರಿಷಿ ಆಡಿಟಿಂಗ್ ಕೈಗೊಂಡರೆ ತಮ್ಮ ವಿರುದ್ಧ ತಾವೇ ತನಿಖೆ ನಡೆಸಿದಂತಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.