ಶೇ.2.5ರಷ್ಟು ಹೆಚ್ಚು ಜಿಡಿಪಿ ಲೆಕ್ಕಾಚಾರ
Team Udayavani, Jun 12, 2019, 6:10 AM IST
ಹೊಸದಿಲ್ಲಿ: ದೇಶದ ಒಟ್ಟು ತಲಾ ಆದಾಯ (ಜಿಡಿಪಿ) ಶೇ.2.5ರಷ್ಟು ಹೆಚ್ಚಾಗಿ ಅಂದಾಜು ಮಾಡಲಾಗಿದೆ. ಜಿಡಿಪಿ ಲೆಕ್ಕಾಚಾರ ವಿಧಾನ ವನ್ನು 2011-12 ಮತ್ತು 2016- 17ನೇ ಸಾಲಿನ ವಿತ್ತೀಯ ವರ್ಷಗಳ ನಡುವೆ ಬದಲು ಮಾಡಿದ್ದರಿಂದ ಹೀಗಾಗಿದೆ ಎಂದು ಕೇಂದ್ರದ ಮಾಜಿ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯಂ ಹೇಳಿದ್ದಾರೆ.
ಹಾರ್ವರ್ಡ್ ವಿವಿಯಲ್ಲಿ ಪ್ರಸ್ತುತ ಪಡಿಸಿದ ಸಂಶೋಧನಾ ಪ್ರಬಂಧದಲ್ಲಿ ಈ ಅಂಶ ಉಲ್ಲೇ ಖೀಸಿದ್ದಾರೆ. 2011-12 ಮತ್ತು 2016-17ನೇ ಸಾಲಿನ ಅವಧಿಯಲ್ಲಿ ಜಿಡಿಪಿ ಪ್ರಮಾಣ ವಾಸ್ತವದಲ್ಲಿ ಶೇ.4.5ರಷ್ಟು ಆಗಬೇಕಾಗಿತ್ತು. ಆದರೆ ಅದನ್ನು ಶೇ.7 ಎಂದು ಲೆಕ್ಕ ಹಾಕಲಾ ಗಿತ್ತು ಎಂದಿದ್ದಾರೆ. ಜಿಡಿಪಿ ಲೆಕ್ಕ ಹಾಕುವ ಪದ್ಧತಿಯನ್ನು ಮೋದಿ ನೇತೃತ್ವದ ಸರಕಾರ ತನ್ನ ಆಡಳಿತದ ಮೊದಲ ಅವಧಿಯಲ್ಲಿ ಬದಲು ಮಾಡಿತ್ತು. ಇದೇ ವೇಳೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರಕಾರ, ವಿಶ್ವಸಂಸ್ಥೆಯ ಅಂಕಿಅಂಶ ಆಯೋಗ ರಚಿಸಿದ ಮಾನದಂಡದ ಆಧಾರದಲ್ಲೇ ಜಿಡಿಪಿ ಲೆಕ್ಕಾ ಚಾರ ಮಾಡಲಾಗಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.