ಅಮೆರಿಕನ್ ಪ್ರಜೆಗಳಿಗೆ ವಂಚನೆ: ಕಾಲ್ ಸೆಂಟರ್ ದಾಳಿ; 8 ಮಂದಿ ಸರೆ
Team Udayavani, Nov 2, 2018, 7:14 PM IST
ಮುಂಬಯಿ : ವಯಾಗ್ರಾ ಸಹಿತ ನಿಷೇಧಿತ ದ್ರವ್ಯಗಳನ್ನು ಪೂರೈಸುವ ಭರವಸೆ ನೀಡಿ ಅಮೆರಿಕದ ಪ್ರಜೆಗಳನ್ನು ವಂಚಿಸುತ್ತಿದ್ದ ಕಾಲ್ ಸೆಂಟರ್ ಜಾಲದಲ್ಲಿ ಶಾಮೀಲಾದ ಆರೋಪದ ಮೇಲೆ ಮುಂಬಯಿ ಪೊಲೀಸರು ಇಂದು ಶುಕ್ರವಾರ 8 ಮಂದಿಯನ್ನು ಬಂಧಿಸಿದ್ದಾರೆ.
ನಗರ ಹೊರವಲಯದ ಕುರ್ಲಾದಲ್ಲಿನ ಕಾಲ್ ಸೆಂಟರ್ ಮೂಲಕ ಈ ಜಾಲ ಕಳೆದ ಎರಡು ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ಈ ಅವಧಿಯಲ್ಲಿ ಈ ಜಾಲ ಸಾವಿರಾರು ಮಂದಿಯನ್ನು ವಂಚಿಸಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬಯಿ ಪೊಲೀಸ್ ಕ್ರೈಂ ಬ್ರಾಂಚ್ ನ ಐದನೇ ಘಟಕದ ಸಿಬಂದಿಗಳು ಕಾಲ್ ಸೆಂಟರ್ಗೆ ದಾಳಿ ನಡೆಸಿ ಮ್ಯಾನೇಜರ್ ಇ ಮುಕದಂ (26), ಸೇಲ್ಸ್ ಎಕ್ಸಿಕ್ಯುಟಿವ್ ಅರ್ಬಾಜ್ ಗಫರ್ ಶೇಖ್ (20) ಮತ್ತು ಟೆಲಿ ಕಾಲರ್ ಶಾರುಖ್ ಅನ್ಸಾರಿ (20), ಜುನೇದ್ ಶೇಖ್ (22), ಕಾದಿರ್ ಸಯ್ಯದ್ (20), ಆತಿಫ್ ಶೇಖ್ (20), ಅಹಾದ್ ಖಾನ್ (21) ಮತ್ತು ಸಲ್ಮಾನ್ ಖಾನ್ (23) ಅವರನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.