ಕೈ ಅಭ್ಯರ್ಥಿಗಳ ಪ್ರಚಾರ ಶುರು; ಬ್ರಿಟನ್ ಮಾದರಿ ಚರ್ಚೆಗೆ ಸಿದ್ಧ
ಸಹಮತದ ಆಯ್ಕೆಗೆ ಸೂಚಿಸಿದ್ದೆ: ಖರ್ಗೆ
Team Udayavani, Oct 3, 2022, 6:50 AM IST
ನವದೆಹಲಿ:ಈ ತಿಂಗಳ 17ರಂದು ನಡೆಯುವ ಕಾಂಗ್ರೆಸ್ ಅಧ್ಯಕ್ಷೀಯ ಸ್ಥಾನದ ಚುನಾವಣೆಗೆ ಅಭ್ಯರ್ಥಿಗಳಾದ ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಪ್ರಚಾರ ಶುರು ಮಾಡಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಹಮತದ ವ್ಯಕ್ತಿಯನ್ನು ಆಯ್ಕೆ ಮಾಡುವುದೇ ತಮ್ಮ ಆದ್ಯತೆಯಾಗಿತ್ತು. ಈ ಅಂಶವನ್ನು ಮತ್ತೂಬ್ಬ ಅಭ್ಯರ್ಥಿ ಶಶಿ ತರೂರ್ ಬಳಿ ಚರ್ಚಿಸಿದ್ದೆ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನವದೆಹಲಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತರೂರ್ ಸ್ಪರ್ಧೆ ಇರಲೇಬೇಕು ಎಂದು ಪ್ರತಿಪಾದಿಸಿದ್ದರು ಎಂದರು. ಪ್ರಜಾಪ್ರಭುತ್ವ ಬಲಗೊಳಿಸಲು ಚುನಾವಣೆ ಅಗತ್ಯ ಎನ್ನುವುದು ಅವರ ವಾದವಾಗಿತ್ತು ಎಂದರು.
“ಒಂದು ವೇಳೆ ಅಧ್ಯಕ್ಷನಾದರೆ, ಪಕ್ಷಕ್ಕೆ ಉತ್ತಮ ಸ್ಥಿತಿ ತಂದುಕೊಡುವ ನಿಟ್ಟಿನಲ್ಲಿ ಗಾಂಧಿ ಕುಟುಂಬದ ಸದಸ್ಯರನ್ನು ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರ ಜತೆಗೆ ಚರ್ಚಿಸುತ್ತೇನೆ’ ಎಂದರು. ಜತೆಗೆ ಗಾಂಧಿ ಕುಟುಂಬದ ಅಧಿಕೃತ ಅಭ್ಯರ್ಥಿ ಎಂಬ ವಾದವನ್ನೂ ಅವರು ತಿರಸ್ಕರಿಸಿದ್ದಾರೆ.
ಪಕ್ಷದಲ್ಲಿ ಜಿ-23 ಎಂಬ ಗುಂಪು ಇಲ್ಲ. ಪಕ್ಷದ ಎಲ್ಲಾ ಹಿರಿಯ ಮತ್ತು ಕಿರಿಯ ನಾಯಕರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಬಲವಂತ ಮಾಡಿದರು ಎಂದರು.
ಖರ್ಗೆಗೆ ಸಾಧ್ಯವಿಲ್ಲ:
ಇದೇ ವೇಳೆ ಮತ್ತೊಬ್ಬ ಅಭ್ಯರ್ಥಿ ಶಶಿ ತರೂರ್ ನಾಗ್ಪುರದಿಂದ ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್‌ಗೆ ಅಗತ್ಯವಾಗಿರುವ ಬದಲಾವಣೆಯನ್ನು ತರಲು ಖರ್ಗೆ ಅವರಿಂದ ಸಾಧ್ಯವಿಲ್ಲ ಎಂದರು.
ಕೇರಳದಿಂದ ತಮಗೆ ಬೆಂಬಲ ಸಿಕ್ಕಿದ್ದಾಗಿ ಹೇಳಿಕೊಂಡರು. ಬ್ರಿಟನ್‌ನಲ್ಲಿ ಪ್ರಧಾನಿ ಹುದ್ದೆಗೆ ನಾಯಕನ ಆಯ್ಕೆಗೆ ಪಕ್ಷದೊಳಗೆ ಇರುವ ಸ್ಪರ್ಧಿಗಳ ನಡುವೆ ಬಹಿರಂಗ ಚರ್ಚೆ ನಡೆದಿತ್ತು. ಕಾಂಗ್ರೆಸ್‌ನಲ್ಲಿಯೂ ಕೂಡ ಅದೇ ಮಾದರಿ ಚರ್ಚೆ ನಡೆಯುದಿದ್ದರೆ ಸಿದ್ಧನಿದ್ದೇನೆ ಎಂದು ತರೂರ್ “ಪಿಟಿಐ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.